ಸಿಡಿ ಪ್ರಕರಣ :   ಯುವತಿಯ ಪೋಷಕರು ಡಿ.ಕೆ.ಶಿವಕುಮಾರ್ ಮೇಲೆ ಗಂಭೀರ ಆರೋಪ - BC Suddi
ಸಿಡಿ ಪ್ರಕರಣ :   ಯುವತಿಯ ಪೋಷಕರು ಡಿ.ಕೆ.ಶಿವಕುಮಾರ್ ಮೇಲೆ ಗಂಭೀರ ಆರೋಪ

ಸಿಡಿ ಪ್ರಕರಣ :   ಯುವತಿಯ ಪೋಷಕರು ಡಿ.ಕೆ.ಶಿವಕುಮಾರ್ ಮೇಲೆ ಗಂಭೀರ ಆರೋಪ

ಬೆಂಗಳೂರು: ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿಯ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಡಿ ಲೇಡಿಯ ಪೋಷಕರು, “ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ದಾಖಲೆಗಳಿವೆ. ಎಸ್‌ಐಟಿಗೆ ಕೆಲವು ದಾಖಲಗಳನ್ನು ನೀಡಿದ್ದೇವೆ.ನಿಮ್ಮ ಹೊಲಸು ರಾಜಕಾರಣಕ್ಕೆ ಒಬ್ಬ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಏಕೆ ಬಲಿ ಕೊಡುತ್ತಿದ್ದೀರಿ” ಎಂದಿದ್ದಾರೆ.

“ರಾಜಕಾರಣಿಗಳು ಓರ್ವ ಹೆಣ್ಣು ಮಗುವನ್ನು ಯಾವ ರೀತಿಯಾಗಿ ಆಡಿಸುತ್ತಿದ್ದಾರೆ ಎಂದು ಎಲ್ಲರಿಗೆ ತಿಳಿದಿದೆ. ಡಿಕೆಶಿ ಅವರು ನನ್ನ ಅಕ್ಕನಿಗೆ ಹಣ ನೀಡಿ ಆಕೆಯನ್ನು ಗೋವಾಕ್ಕೆ ಕಳುಹಿಸಿದ್ದಾರೆ. ಅಕ್ಕನನ್ನು ಡಿಕೆಶಿ ಅವರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಮೊದಲು ನನ್ನ ಅಕ್ಕನನ್ನು ನಮ್ಮ ಬಳಿ ತಂದು ಬಿಡಿ ಅಷ್ಟು ಸಾಕು” ಎಂದು ಯುವತಿಯ ಸಹೋದರ ತಿಳಿಸಿದ್ದಾರೆ.

“ಯಾರೋ ನನ್ನ ವಿಟಿಯೋ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ರಾಜಕೀಯದ ಆಟ. ಫೆ.5 ರಂದು ನಾನು ಅಕ್ಕನನ್ನು ಭೇಟಿಯಾಗಿದ್ದೆ. ಫೆ.20ರಂದು ಆಕೆಯನ್ನು ನಾವು ಕೊನೆಯಾದಾಗಿ ಭೇಟಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದತೆ ನಮ್ಮ ಅಕ್ಕ ಪತ್ತೆಯಾಗಿಲ್ಲ” ಎಂದಿದ್ದಾರೆ.

error: Content is protected !!