ಸಿಡಿ ಪ್ರಕರಣ: ಸಿಡಿಲೇಡಿ ಇಂದು ಮೂರನೇ ವಿಡಿಯೋ ರಿಲೀಸ್ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುತ್ತೇನೆ ಎಂದ ಸಿಡಿಲೇಡಿ - BC Suddi
ಸಿಡಿ ಪ್ರಕರಣ: ಸಿಡಿಲೇಡಿ ಇಂದು ಮೂರನೇ ವಿಡಿಯೋ ರಿಲೀಸ್ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುತ್ತೇನೆ ಎಂದ ಸಿಡಿಲೇಡಿ

ಸಿಡಿ ಪ್ರಕರಣ: ಸಿಡಿಲೇಡಿ ಇಂದು ಮೂರನೇ ವಿಡಿಯೋ ರಿಲೀಸ್ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುತ್ತೇನೆ ಎಂದ ಸಿಡಿಲೇಡಿ

ಬೆಂಗಳೂರು : ಕರ್ನಾಟಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿಡಿ ಪ್ರಕರಣದ ಸಿಡಿಲೇಡಿ ಇಂದು ಮೂರನೇ ವಿಡಿಯೋ ರಿಲೀಸ್ ಮಾಡಿದ್ದು. ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ. ಇಂದು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸಿಡಿಲೇಡಿ, ನಾನು 24 ದಿನದಿಂದ ನನಗೆ ಜೀವ ಬೆದರಿಕೆ ಇತ್ತು. ಈವಾಗ ನನಗೆ ಧೈರ್ಯ ಬಂದಿದೆ.

ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಹೇಳಿದ್ದಾಳೆ. ಎಲ್ಲ ಪಕ್ಷದ ನಾಯಕರು, ರಾಜ್ಯದ ಜನರು ನನಗೆ ಬೆಂಬಲಿಸುತ್ತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ. ವಕೀಲ ಜಗದೀಶ್ ಅವರ ಮೂಲಕ ಇಂದು ರಮೇಶ್ ಜಾರಕಿಹೊಳಿ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ. 100% ಗೊತ್ತು ನಮ್ಮ ಅಪ್ಪ ಸ್ವ ಇಚ್ಛೆಯಿಂದ ದೂರು ಕೊಟ್ಟಿಲ್ಲ. ಯಾಕೆಂದ್ರೇ ನಮ್ಮ ತಂದೆ-ತಾಯಿಗಳಿಗೆ ನಾ ಏನು ಅಂತ ಗೊತ್ತು. ನಮ್ಮ ತಂದೆ-ತಾಯಿ ಯಾವಾಗ ಸೇಫ್ ಆಗಿದ್ದಾರೆ ಅಂತ ಗೊತ್ತಾಗುತ್ತೋ ಆಗ ನಾನು ಎಸ್ ಐಟಿ ಮುಂದೆ ತನಿಖೆಗೆ ಹಾಜರಾಗುತ್ತೇನೆ ಎಂದಿದ್ದಾರೆ.

ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ಬಸವರಾಜ್ ಬೊಮ್ಮಾಯಿಗೆ ಕೇಳಿಕೊಳ್ಳೋದಷ್ಟೇ.. ನಮ್ಮ ತಂದೆ ತಾಯಿಗೆ ರಕ್ಷಣೆ ಕೊಡಿಸಿ. ನಾನು 12ನೇ ತಾರೀಕಿಗೆ ಎಸ್ ಐಟಿ ಅಧಿಕಾರಿಗಳಿಗೆ ವೀಡಿಯೋ ನೀಡುತ್ತೇನೆ. ಆದ್ರೇ 13ನೇ ತಾರೀಕಿನಂದೇ ವೀಡಿಯೋ ಬಿಡುಗಡೆ ಆಗುತ್ತದೆ. ಈಗ ಹೇಳಿ ಎಸ್ ಐಟಿ ಅವರು ಯಾರ ಪರವಾಗಿದ್ದಾರೆ ಅಂತ ನಂಬೋದು ಎಂದಿದ್ದಾರೆ.

 

error: Content is protected !!