''ಸಿಡಿನಾ ಅದ್ಯಾವುದು ನನಗೆ ಗೊತ್ತಿಲ್ಲ, ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲಮ್ಮಾ'' ಎಂದು ನಕ್ಕ ಸಿಎಂ ಬಿಎಸ್‌ವೈ - BC Suddi
”ಸಿಡಿನಾ ಅದ್ಯಾವುದು ನನಗೆ ಗೊತ್ತಿಲ್ಲ, ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲಮ್ಮಾ” ಎಂದು ನಕ್ಕ ಸಿಎಂ ಬಿಎಸ್‌ವೈ

”ಸಿಡಿನಾ ಅದ್ಯಾವುದು ನನಗೆ ಗೊತ್ತಿಲ್ಲ, ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲಮ್ಮಾ” ಎಂದು ನಕ್ಕ ಸಿಎಂ ಬಿಎಸ್‌ವೈ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಲು ಉತ್ಸಾಹ ತೋರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ”ಸಿಡಿನಾ, ನಂಗೊತ್ತಿಲ್ಲ, ನಿಮ್ಗೆ ಚೆನ್ನಾಗಿ ಗೊತ್ತಿರಬೇಕಲ್ಲಮ್ಮಾ” ಎಂದು ಹೇಳಿ ನಕ್ಕರು. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪಕ್ಷದ ಶಾಸಕರ ಜತೆಗೆ ಮ್ಯಾರಥಾನ್ ಮೀಟಿಂಗ್ ನಡೆಸಿ ಹೊರ ಬಂದ ಅವರ ಬಳಿ ಮಾಧ್ಯಮಗಳು ಪ್ರಶ್ನಿಸಿದಾಗ ಸಭೆ ”ಫಲಪ್ರದವಾಗಿದೆ” ಎಂದಷ್ಟೇ ಹೇಳಿ ಹೊರಟು ಹೋದರು.

ಈ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಯುವತಿ ಇಂದು ಎರಡನೇ ವೀಡೀಯೋ ಬಿಡುಗಡೆ ಮಾಡಿರುವ ಬಗ್ಗೆ ಪತ್ರಕರ್ತೆಯೋರ್ವರು ಪ್ರತಿಕ್ರಿಯೆ ಕೇಳಿದಾಗ, ”ಸಿಡಿನಾ ಅದ್ಯಾವುದು ನನಗೆ ಗೊತ್ತಿಲ್ಲ, ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲಮ್ಮಾ” ಎಂದು ಹೇಳಿ ಬೇರೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

ಎಸ್?ಐಟಿ ಪೊಲೀಸರು ನೀಡಿದ ನಾಲ್ಕೈದು ನೋಟಿಸ್?ಗಳಿಗೆ ಉತ್ತರಿಸದ ಸಿಡಿ ಪ್ರಕರಣದ ಸಂತ್ರಸ್ತೆ ಮತ್ತೊಂದು ವಿಡಿಯೋ ತುಣುಕನ್ನು ಹರಿಯಬಿಟ್ಟಿದ್ದು ಈ ವಿಡಿಯೋದಲ್ಲಿ “ನಮ್ಮ ತಂದೆ, ತಾಯಿ ಸ್ವಇಚ್ಛೆಯಿಂದ ದೂರು ನೀಡಿಲ್ಲ. ನಾನು ತಪ್ಪೇ ಮಾಡಿಲ್ಲ ಎನ್ನುವುದು 100% ನಮ್ಮ ಪೋಷಕರಿಗೆ ಗೊತ್ತು. ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ ನಾನು ಎಸ್‌ಐಟಿಗೆ ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಹಾಗೂ ವಿಚಾರಣೆಗೆ ಬರುತ್ತೇನೆ” ಎಂದು ಹೇಳಿದ್ದಾರೆ.

error: Content is protected !!