ವಿಧಾನಸಭೆಯಲ್ಲಿ ಇಂದು ಸರ್ಕಾರಕ್ಕೆ 'ಸಿಡಿ' ಡಿಚ್ಚಿ ಕೊಡಲು ವಿಪಕ್ಷ ನಿರ್ಧಾರ - BC Suddi
ವಿಧಾನಸಭೆಯಲ್ಲಿ ಇಂದು ಸರ್ಕಾರಕ್ಕೆ ‘ಸಿಡಿ’ ಡಿಚ್ಚಿ ಕೊಡಲು ವಿಪಕ್ಷ ನಿರ್ಧಾರ

ವಿಧಾನಸಭೆಯಲ್ಲಿ ಇಂದು ಸರ್ಕಾರಕ್ಕೆ ‘ಸಿಡಿ’ ಡಿಚ್ಚಿ ಕೊಡಲು ವಿಪಕ್ಷ ನಿರ್ಧಾರ

ಬೆಂಗಳೂರು: ಮಾಜಿ ಸಚಿವ, ಬೆಳಗಾವಿ ಸಾಹುಕಾರ ರಮೇಶ್​ ಜಾರಕಿಹೊಳಿ ಅವರ ಸೆಕ್ಸ್‌ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಇಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ.

ರಾಸಲೀಲೆ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್‌ ಪಡೆ ನಿರ್ಧಾರ ಮಾಡಿದೆ. ಸಿಡಿಯಲ್ಲಿ ಕನ್ನಡಿಗರು, ರಾಜ್ಯದ ಬಗ್ಗೆ ಅವಮಾನ ಮಾಡಲಾಗಿದೆ. ಅಷ್ಟೇ ಅಲ್ಲದೆ ಸಿಎಂ ಯಡಿಯೂರಪ್ಪ ಅವರ ವಿರುದ್ಧವೂ ಆರೋಪ ಮಾಡಲಾಗಿದೆ. ಹೀಗಾಗಿ ಸಿಡಿಯಲ್ಲಿರುವ ಕೆಲವು ಮಾತುಗಳ ಬಗ್ಗೆಯೂ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ಮುಂದಾಗಿದೆ.

ಸಿಡಿ ರಿಲೀಸ್ ಆಗುತ್ತಿದ್ದಂತೆ ಕೋರ್ಟ್ ಮೊರೆ ಹೋದ 6 ಜನ ಸಚಿವರ ಬಗ್ಗೆಯೂ ಚರ್ಚೆಗೆ ಕಾಂಗ್ರೆಸ್ ಪಟ್ಟು ಹಿಡಿಯಲು ನಿರ್ಧರಿಸಿದೆ. ಹೀಗಾಗಿ ಇದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.

error: Content is protected !!