ರಮೇಶ್ ಜಾರಕಿಹೊಳಿ ನಾಡ ದ್ರೋಹಿ: ನರೇಶ್ ಗೌಡ - BC Suddi
ರಮೇಶ್ ಜಾರಕಿಹೊಳಿ ನಾಡ ದ್ರೋಹಿ: ನರೇಶ್ ಗೌಡ

ರಮೇಶ್ ಜಾರಕಿಹೊಳಿ ನಾಡ ದ್ರೋಹಿ: ನರೇಶ್ ಗೌಡ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ಈ ಮಧ್ಯೆ ಮಾಜಿ ಪತ್ರಕರ್ತರಾದ ಭವಿತ್ ಬೆನ್ನಲ್ಲೇ ನರೇಶ್ ಗೌಡ ಸೆಲ್ಫಿ ವಿಡಿಯೋ ಮೂಲಕ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಮಾಜಿ ಸಚಿವರ ಪ್ರಕರಣದಲ್ಲಿ ವ್ಯವಸ್ಥಿತವಾಗಿ ನನ್ನನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆದಿದೆ. ಸಂತ್ರಸ್ತೆಯು ನನ್ನನ್ನು ಭೇಟಿಯಾಗಿ ರಮೇಶ್ ಜಾರಕಿಹೊಳಿ ಅವರಿಂದ ನನಗೆ ಅನ್ಯಾಯವಾಗಿದೆ. ದಯವಿಟ್ಟು ನ್ಯಾಯ ಕೊಡಿಸಿದ ಎಂದು ಕೇಳಿಕೊಂಡಿದ್ದಳು. ಅದಕ್ಕೆ ನಾನು, “ದಾಖಲೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ದಾಖಲೆ ನೀಡುವಂತೆ ತಿಳಿಸಿದ್ದೆ. ಅದಾದ ಬಳಿಕ ಯುವತಿ ನನ್ನ ಸಂಪರ್ಕದಲ್ಲಿದ್ದಳು. ಮಗಳ ನಾಮಕರಣ ಕಾರ್ಯಕ್ರಮದಕ್ಕೂ ಯುವತಿ ಬಂದಿದ್ದಳು” ಎಂದು ನರೇಶ್ ಗೌಡ ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ರಾಜ್ಯದ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹೀಗಾಗಿ ಆತ ನಾಡ ದ್ರೋಹಿ. ಹೀಗಿದ್ದರೂ ಆತನ ಪರ ಮಾತನಾಡಲಾಗುತ್ತಿದೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ಪಡೆದಿದ್ದೆ ಆದರೆ ಬಂದು ಪರಿಶೀಲನೆ ಮಾಡಿ ಎಂದು ನರೇಶ್ ಗೌಡ ತಿಳಿಸಿದ್ದಾರೆ.

error: Content is protected !!