'ಸಿಡಿ ಲೇಡಿ' ವಾಸವಿದ್ದ ಬಾಡಿಗೆ ಮನೆ ಮೇಲೆ ಎಸ್‌ಐಟಿ ದಾಳಿ..! - BC Suddi
‘ಸಿಡಿ ಲೇಡಿ’ ವಾಸವಿದ್ದ ಬಾಡಿಗೆ ಮನೆ ಮೇಲೆ ಎಸ್‌ಐಟಿ ದಾಳಿ..!

‘ಸಿಡಿ ಲೇಡಿ’ ವಾಸವಿದ್ದ ಬಾಡಿಗೆ ಮನೆ ಮೇಲೆ ಎಸ್‌ಐಟಿ ದಾಳಿ..!

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿ ತಂಡವು ಸಂತ್ರಸ್ತೆ ಬಾಡಿಗೆ ಇದ್ದ ಮನೆಯ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದೆ. ಆರ್.ಟಿ.ನಗರದ ಮನೆಗೆ ಎಸಿಪಿ ಧರ್ಮೇಂದ್ರ ನೇತೃತ್ವದ ಎಐಟಿ ತಂಡವು ಭೇಟಿಕೊಟ್ಟಿದ್ದು, ಯುವತಿ ವಾಸವಿದ್ದ ರೂಮ್? ಪರಿಶೀಲನೆ ಮಾಡಲಾಗಿದೆ.

ಬಳಿಕ ಕಟ್ಟಡದ ಮಾಲೀಕರಿಂದ ಮಾಹಿತಿ ಪಡೆಯಿತು. ಸಿಡಿಯಲ್ಲಿನ ಯುವತಿ ಇತ್ತೀಚೆಗೆ ನಿಮ್ಮನ್ನು ಸಂಪರ್ಕಿಸಿದ್ರಾ? ಆಕೆ ಇಲ್ಲಿದ್ದಾಗ ಬೇರೆ ಯಾರಾದರೂ ಇಲ್ಲಿಗೆ ಬರುತ್ತಿದ್ರಾ? ಎಂದು ಮನೆ ಮಾಲೀಕರನ್ನು ಪ್ರಶ್ನಿಸಿದರಂತೆ. ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಮನೆ ಮಾಲೀಕರು, “ವಿಡಿಯೋ ಬಹಿರಂಗವಾಗುತ್ತಿದ್ದoತೆ ಸಂತ್ರಸ್ತೆ ನಾಪತ್ತೆ ಆಗಿದ್ದಳು. ಆದರೆ 3-4 ದಿನದ ಹಿಂದೆ ನನಗೆ ಕರೆ ಮಾಡಿ ಕ್ಷಮೆ ಕೇಳಿದ್ದಾರೆ” ಎಂಬ ಮಾಹಿತಿ ನೀಡಿದ್ದಾರೆ.

error: Content is protected !!