ಸಿಡಿ ಕೇಸ್ ಪ್ರಕರಣ: ಅಂತಿಮವಾಗಿ ಯಾರಿಗೆ ಸುತ್ತಿಹಾಕಿಕೊಳ್ಳಲಿದೆ ಎಂದು ನೋಡಲು ನಾನು ಕಾಯುತ್ತಿದ್ದೇನೆ: ಎಚ್‌ಡಿಕೆ - BC Suddi
ಸಿಡಿ ಕೇಸ್ ಪ್ರಕರಣ: ಅಂತಿಮವಾಗಿ ಯಾರಿಗೆ ಸುತ್ತಿಹಾಕಿಕೊಳ್ಳಲಿದೆ ಎಂದು ನೋಡಲು ನಾನು ಕಾಯುತ್ತಿದ್ದೇನೆ: ಎಚ್‌ಡಿಕೆ

ಸಿಡಿ ಕೇಸ್ ಪ್ರಕರಣ: ಅಂತಿಮವಾಗಿ ಯಾರಿಗೆ ಸುತ್ತಿಹಾಕಿಕೊಳ್ಳಲಿದೆ ಎಂದು ನೋಡಲು ನಾನು ಕಾಯುತ್ತಿದ್ದೇನೆ: ಎಚ್‌ಡಿಕೆ

ರಾಮನಗರ: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್ ಸಿಡಿ ಹಿಂದಿನ ‘ಮಹಾನಾಯಕ’ ಯಾರೆಂದು ನೋಡಲು ನಾನು ಕಾತುರನಾಗಿದ್ದೇನೆ. ಅಂತಿಮವಾಗಿ ಯಾರಿಗೆ ಸುತ್ತಿಹಾಕಿಕೊಳ್ಳಲಿದೆ ಎಂದು ನೋಡಲು ನಾನು ಕಾಯುತ್ತಿದ್ದೇನೆ. ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಸಲೀಲೆ ಸಿಡಿ ಪ್ರಕರಣವು ಸಾರ್ವಜನಿಕವಾಗಿ ನಗೆಪಾಟಲುಗೆ ದಾರಿಯಾಗಿದೆ. ನಾವು ಮತ್ತು ನಮ್ಮ ಕುಟುಂಬ ಇಂತಹ ವಿಚಾರಗಳನ್ನು ರಾಜಕೀಯವಾಗಿ ಬಳಕೆ ಮಾಡಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 60 ವರ್ಷದ ರಾಜಕೀಯದಲ್ಲಿ ಈ ರೀತಿಯ ರಾಜಕೀಯ ಮಾಡಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಯಾಕೆ ಹೇಳುತ್ತಿದ್ದಾರೋ ನನಗೆ ಗೊತ್ತಾಗುತ್ತಿಲ್ಲ. ಯಾರು ಹೇಳಿದ್ದಾರೆ ಅವರ ಹೆಸರನ್ನು ರಮೇಶ್ ಜಾರಕಿಹೊಳಿ ಹೇಳಿದ್ರಾ? ಮಾಧ್ಯಮಗಳು ಸಹ ಅವರ ಹೆಸರನ್ನು ಹೇಳಿಲ್ಲ. ಆದರೂ ಅವರೇ ಯಾಕೆ ತಮ್ಮ ಹೆಸರನ್ನ ಹೇಳುತ್ತಿದ್ದಾರೆ ಅನ್ನೋದು ಯಕ್ಷ ಪ್ರಶ್ನೆ ಎಂದು ಟಾಂಗ್ ಕೊಟ್ಟರು.

 

error: Content is protected !!