ಕೋವಿಡ್ ಕಂಟಕ : ಭಾರತದ ವಿಮಾನಗಳಿಗೆ ಬ್ರೇಕ್ ಹಾಕಿದ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ - BC Suddi
ಕೋವಿಡ್ ಕಂಟಕ : ಭಾರತದ ವಿಮಾನಗಳಿಗೆ ಬ್ರೇಕ್ ಹಾಕಿದ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ

ಕೋವಿಡ್ ಕಂಟಕ : ಭಾರತದ ವಿಮಾನಗಳಿಗೆ ಬ್ರೇಕ್ ಹಾಕಿದ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ

ಕೆನಡಾ/ಒಟ್ಟಾವಾ: ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗಿರುವ ಕಾರಣ ಪರದೇಶಗಳು ಭಾರತದ ವಿಮಾನಗಳಿಗೆ ನಿಷೇಧ ವಿಧಿಸಿವೆ. ಭಾರತ ಮತ್ತು ಪಾಕಿಸ್ತಾನದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ದೇಶಗಳಿಂದ ಆಗಮಿಸುವ ಎಲ್ಲಾ ನಾಗರಿಕ ವಿಮಾನಯಾನ ಕೆನಡಾ 30 ದಿನಗಳ ಕಾಲ ನಿಷೇಧಿಸಿರುವುದಾಗಿ ಸಾರಿಗೆ ಸಚಿವ ಒಮರ್ ಅಲ್ಘಾಬ್ರಾ ತಿಳಿಸಿದ್ದಾರೆ.

ಈ ನಿಷೇಧ ಶುಕ್ರವಾರದಿಂದಲೇ (ಏಪ್ರಿಲ್ 23) ಜಾರಿಯಾಗಲಿದೆ. ಆದರೆ ಈ ನಿರ್ಬಂಧ ಸರಕು ಸಾಗಾಣೆ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ.ಭಾರತದ ವಿಮಾನಗಳಿಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ಯುಎಇ ನಿರ್ಬಂಧ

ಲಂಡನ್ನಿನ ಹೀಥ್ರೂ ಏರ್ ಪೋರ್ಟ್ ಗೆ ಆಗಮಿಸುವ ಭಾರತದ ಹೆಚ್ಚುವರಿ ವಿಮಾನಗಳಿಗೆ ಇಂಗ್ಲೆಂಡ್ ಸರ್ಕಾರ ನಿರಾಕರಣೆ ಹೇಳಿದೆ. ಅಲ್ಲದೆ, ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ನ ಹೌಸ್ ಆಫ್ ಕಾಮನ್ಸ್, ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ನಿರ್ಧರಿಸಿದೆ.

ಶೇ.30 ವಿಮಾನ ಇಳಿಕೆ: ಭಾರತದಿಂದ ಆಗಮಿಸುವ ವಿಮಾನಗಳ ಸಂಖ್ಯೆ ಶೇ.30 ಕಡಿತಗೊಳಿಸಲು ಆಸ್ಟ್ರೇಲಿಯಾ ನಿರ್ಧರಿಸಿದೆ. ಭಾರತದಂಥ ಹೈ -ರಿಸ್ಕ್ ದೇಶಗಳಿಗೆ ಪ್ರಯಾಣಿಸದಂತೆ ಸೂಚಿಸಿದೆ.

ಆಸ್ಪತ್ರೆಯಿಂದ ಕದ್ದ ಕೊರೊನಾ ಲಸಿಕೆಯನ್ನು ವಾಪಾಸ್ ತಂದಿಟ್ಟು ಕ್ಷಮೆಯಾಚಿಸಿದ ಕಳ್ಳ