'ಋತುಚಕ್ರದ ಮುನ್ನ ಹಾಗೂ ಬಳಿಕ ಮಹಿಳೆಯರು ಲಸಿಕೆ ಪಡೆಯಬಹುದೇ?' - ಕೇಂದ್ರ ಸ್ಪಷ್ಟನೆ - BC Suddi
‘ಋತುಚಕ್ರದ ಮುನ್ನ ಹಾಗೂ ಬಳಿಕ ಮಹಿಳೆಯರು ಲಸಿಕೆ ಪಡೆಯಬಹುದೇ?’ – ಕೇಂದ್ರ ಸ್ಪಷ್ಟನೆ

‘ಋತುಚಕ್ರದ ಮುನ್ನ ಹಾಗೂ ಬಳಿಕ ಮಹಿಳೆಯರು ಲಸಿಕೆ ಪಡೆಯಬಹುದೇ?’ – ಕೇಂದ್ರ ಸ್ಪಷ್ಟನೆ

ನವದೆಹಲಿ:”ದೇಶದಲ್ಲಿ ಸದ್ಯ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಮೇ.1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೂಡ ಕೊರೊನಾ ಪಡೆಯಬಹುದು” ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರದ ಈ ತೀರ್ಮಾನದ ನಡುವೆ ಮಹಿಳೆಯರಿಗೆ ಅನುಮಾನವೊಂದು ಕಾಡುತ್ತಿದೆ ಮಹಿಳೆಯರು ಋತಚಕ್ರದ ವೇಳೆ ಕೊರೊನಾ ಲಸಿಕೆ ಪಡೆಯಬಹುದೇ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಋತುಚಕ್ರದ ಐದು ದಿನದ ಮುನ್ನ ಹಾಗೂ ಐದು ದಿನಗಳ ಬಳಿಕ ಕೊರೊನಾ ಲಸಿಕೆ ಪಡೆದುಕೊಳ್ಳಬಾರದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸರ್ಕಾರ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದು, “ಇದು ಸುಳ್ಳು ಸುದ್ದಿ. ಇಂತಹ ವದಂತಿಗಳನ್ನು ಯಾರೂ ನಂಬಬೇಡಿ. ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆದುಕೊಳ್ಳಬೇಕು” ಎಂದು ಹೇಳಿದೆ.

ಈ ಸುದ್ದಿಯನ್ನು ವೈದ್ಯರೂ ಕೂಡಾ ತಳ್ಳಿಹಾಕಿದ್ದು, “ಋತು ಚಕ್ರಕ್ಕೂ ಹಾಗೂ ಕೊರೊನಾ ಲಸಿಕೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ” ಎಂದು ತಿಳಿಸಿದ್ದಾರೆ.

“ಮಹಿಳೆಯರ ಋತುಚಕ್ರಕ್ಕೆ ಕೊರೊನಾ ಲಸಿಕೆಯಿಂದ ಯಾವುದೇ ರೀತಿಯಾದ ತೊಂದರೆಯಾಗುವುದಿಲ್ಲ. ಯಾವುದೇ ಭಯವಿಲ್ಲದೇ ಮಹಿಳೆಯರು ಕೊರೊನಾ ಲಸಿಕೆ ಪಡೆದುಕೊಳ್ಳಬಹುದು” ಎಂದು ಸ್ತ್ರೀರೋಗ ತಜ್ಞೆ ಡಾ. ಮುಂಜಾಲ್ ವಿ ಕಪಡಿಯಾ ಮಾಹಿತಿ ನೀಡಿದ್ದಾರೆ.