ಬೆಳಗಾವಿ : ಲೋಕಸಭಾ ಉಪಚುನಾವಣೆಯಿಂದ ದೂರ ಉಳಿದ ಗ್ರಾಮಸ್ಥರು - BC Suddi
ಬೆಳಗಾವಿ : ಲೋಕಸಭಾ ಉಪಚುನಾವಣೆಯಿಂದ ದೂರ ಉಳಿದ ಗ್ರಾಮಸ್ಥರು

ಬೆಳಗಾವಿ : ಲೋಕಸಭಾ ಉಪಚುನಾವಣೆಯಿಂದ ದೂರ ಉಳಿದ ಗ್ರಾಮಸ್ಥರು

ಬೆಳಗಾವಿ : ಲೋಕಸಭಾ ಉಪಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ ಆದ್ರೆ ಈ ಗ್ರಾಮದ ಗ್ರಾಮಸ್ಥರು ಪ್ರವಾಹಪೀಡಿತ ಗ್ರಾಮಗಳ ಸ್ಥಳಾಂತರ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ.

ಹೌದು ರಾಮದುರ್ಗ ತಾಲೂಕಿನ ಹಿರೇತಡಸಿ, ಚಿಕ್ಕತಡಸಿ ಗ್ರಾಮದ ಸುಮಾರು 2500ಕ್ಕೂ ಅಧಿಕ ಜನ ಮತದಾನ ಬಹಿಷ್ಕಾರ ಮಾಡುವ ಮೂಲಕ ಗ್ರಾಮಸ್ಥರು ತಮ್ಮ ಬೇಡಿಕೆ ಈಡೇರಿಸದ ಅಧಿಕಾರಿಗಳ ಧೋರಣೆಯನ್ನು ಖಂಡಿಸಿದ್ದಾರೆ.

ನೆರೆ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಗ್ರಾಮಸ್ಥರು ಗ್ರಾಮಗಳ ಸ್ಥಳಾಂತರಕ್ಕಾಗಿ ಹಲವು ದಿನಗಳಿಂದ ಬೇಡಿಕೆ ಇಟ್ಟರು ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದಕ್ಕೆ ಮತದಾನದಿಂದ ದೂರ ಉಳಿದಿದ್ದಾರೆ.
ಇನ್ನು ಮತದಾನಕ್ಕೆ ಜನರ ಮನವೊಲೈಕೆ ಮಾಡಬೇಕಾದ ಜಿಲ್ಲಾಡಳಿದ ಕೈಕಟ್ಟಿ ಕುಳಿತಿದೆ.

ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿಗೆ ಕೊರೊನಾ ಸೋಂಕು ದೃಢ