ಬಸ್ ಬಂದ್ : ಸಂಚಾರಕ್ಕೆ ಸಂಚಕಾರ, ಪ್ರಯಾಣಿಕರ ಪರದಾಟ - BC Suddi
ಬಸ್ ಬಂದ್ : ಸಂಚಾರಕ್ಕೆ ಸಂಚಕಾರ, ಪ್ರಯಾಣಿಕರ ಪರದಾಟ

ಬಸ್ ಬಂದ್ : ಸಂಚಾರಕ್ಕೆ ಸಂಚಕಾರ, ಪ್ರಯಾಣಿಕರ ಪರದಾಟ

ಬೆಂಗಳೂರು : 6ನೇ ವೇತನ ಆಯೋಗ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರುವ ಮುಷ್ಕರ ಆರಂಭಿಸಿರುವ ಪರಿಣಾಮ ಪ್ರಯಾಣಿಕರು ಪರದಾಟ ನಡೆಸುವಂತ್ತಾಗಿದೆ. ಮಂಗಳವಾರ ದಿನದ ಎರಡನೇ ಪಾಳಿ ಮಧ್ಯಾಹ್ನದಿಂದ ಕಾರ್ಯನಿರ್ವಹಿಸುವ ಮತ್ತು ದೂರದೂರಿಗೆ ಸಂಚರಿಸುವ ಬಸ್ ಗಳ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾದರೆ ಮುಷ್ಕರದಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಬಹುದು, ಮುಷ್ಕರ ವಿಫಲವಾಗಬಹುದು ಎಂಬ ಕಾರಣಕ್ಕೆ ಹೆಚ್ಚಿನ ಸಿಬ್ಬಂದಿ ಗೈರಾಗಿದ್ದರು.

ಬ್ರೇಕಿಂಗ್ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಜಾರಕಿಹೊಳಿ

ಇದರಿಂದಾಗಿ ಬೆಂಗಳೂರು, ಧಾರವಾಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಧ್ಯಾಹ್ನದ ನಂತರ ಅನೇಕ ಬಸ್ ಗಳ ಓಡಾಟ ಬಂದ್ ಆಗಿ ಪ್ರಯಾಣಿಕರು ಪರದಾಡಬೇಕಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ಧಾರವಾಡ, ಬೆಳಗಾವಿ, ಗದಗ ಸೇರಿ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಶೇ.30ಕ್ಕೂ ಅಧಿಕ ನೌಕರರು ಒಂದು ದಿನ ಮೊದಲೇ ಕೆಲಸಕ್ಕೆ ಗೈರಾಗಿದ್ದರು.

ಬೆಂಗಳೂರಿನಲ್ಲಿ ಪರದಾಟ ಕೆಎಸ್ ಆರ್ ಟಿಸಿ ಮತ್ತು ಬೆಂಗಳೂರು ನಗರ ಸಾರಿಗೆಯಾದ ಬಿಎಂಟಿಸಿಯಲ್ಲೂ 2ನೇ ಪಾಳಿಯ ಶೇ.40ರಷ್ಟುಸಿಬ್ಬಂದಿ ಗೈರಾಗಿದ್ದ ಕಾರಣ ಶೇ.30ರಷ್ಟುಬಸ್ ಗಳ ಓಡಾಟ ಸ್ಥಗಿತಗೊಂಡಿತ್ತು. ಇದರಿಂದ ಬೆಂಗಳೂರಿಂದ ಪರವೂರಿಗೆ ತೆರಳುವವರು ತೀವ್ರ ಪರದಾಡಿದರು. ಕಚೇರಿಗೆ ತೆರಳಲು ಬಿಎಂಟಿಸಿಯನ್ನೇ ನಂಬಿಕೊಂಡಿರುವ ಮಂದಿಯೂ ಸಂಜೆ ಬಳಿಕ ಮನೆ ತಲುಪಲು ಟ್ಯಾಕ್ಸಿ, ರಿಕ್ಷಾಗಳನ್ನೇ ಅವಲಂಬಿಸಬೇಕಾಯಿತು. ರಸ್ತೆಗಿಳಿದಿದ್ದ ಬಸ್ ಗಳು ಬಹುತೇಕ ಭರ್ತಿಯಾಗಿದ್ದವು. ಇಂದು ಕೂಡಾ ಮುಂದುವರೆದ ಬಸ್ ಮುಷ್ಕರದಿಂದ ಸಾರ್ವಜನಿಕರಿಗೆ ನೀರಿಳಿಯದ ಗಂಟಲೊಳ್ ಕಡುಬು ತುರುಕಿ ದಂತಾಗಿದೆ.

error: Content is protected !!