ಏಪ್ರಿಲ್ 7 ರಂದು ಎಲ್ಲ ಸಾರಿಗೆ, ಬಸ್‌ಗಳನ್ನು ಸ್ಥಗಿತಗೊಳಿಸಿ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ - BC Suddi
ಏಪ್ರಿಲ್ 7 ರಂದು ಎಲ್ಲ ಸಾರಿಗೆ, ಬಸ್‌ಗಳನ್ನು ಸ್ಥಗಿತಗೊಳಿಸಿ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ

ಏಪ್ರಿಲ್ 7 ರಂದು ಎಲ್ಲ ಸಾರಿಗೆ, ಬಸ್‌ಗಳನ್ನು ಸ್ಥಗಿತಗೊಳಿಸಿ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಸಾರಿಗೆ ನೌಕಕರು ಚಳುವಳಿ ನಡೆಸಲಿದ್ದು, ಏಪ್ರಿಲ್ 7 ರಂದು ಎಲ್ಲ ಸಾರಿಗೆ, ಬಸ್‌ಗಳನ್ನು ಸ್ಥಗಿತಗೊಳಿಸಿ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಯಲಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಸಾರಿಗೆ ಪ್ರತಿಭಟನೆ ನಡೆಸಲಿದ್ದು, ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚಳುವಳಿ ನಡೆಯಲಿದೆ.

ಸಾರಿಗೆ ನೌಕರರಿಂದ ಏಪ್ರಿಲ್ 2 ರಂದು ಬೆಂಗಳೂರಿನ ಸರ್ಕಲ್‌ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ ಬೋಂಡ ಮಾರಾಟ ಮಾಡಲಿದ್ದು, ಏಪ್ರಿಲ್ 3 ರಂದು ನೌಕರರು ನಗರಗಳ ಸರ್ಕಲ್‌ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಭಿತ್ತಿಪತ್ರ ಪ್ರದರ್ಶನ ಮಾಡಲಿದ್ದು, ಏಪ್ರಿಲ್ 4 ರಂದು ಸಾರ್ವಜನಿಕರಿಗೆ ಕರ ಹಂಚಿಕೆ ಮಾಡಲಿದ್ದಾರೆ.

ಇನ್ನು ಏಪ್ರಿಲ್ 5 ರಂದು ಧರಣಿ ಸತ್ಯಾಗ್ರಹ, ಏಪ್ರಿಲ್ 6 ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಏಪ್ರಿಲ್ 7 ರಂದು ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ.

ನೈಋತ್ಯ ರೈಲ್ವೆ ವಲಯದ ಹಂಗಾಮಿ ಜಿಎಂ ಆಗಿ ಗಜಾನನ ಮಲ್ಯ

error: Content is protected !!