ಸಾರಿಗೆ ಸಂಸ್ಥೆಯ ಬಸ್ ನ ಬ್ರೇಕ್ ವೈಫಲ್ಯ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಾಯ - BC Suddi

ಸಾರಿಗೆ ಸಂಸ್ಥೆಯ ಬಸ್ ನ ಬ್ರೇಕ್ ವೈಫಲ್ಯ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಾಯ

ಗದಗ: ಚಾಲಕನ ಈ ಸಮಯೋಚಿತ ನಿರ್ಧಾರದಿಂದ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ಒಂದು ತಪ್ಪಿದೆ. ಸಾರಿಗೆ ಸಂಸ್ಥೆಯ ಬಸ್ ನ ಬ್ರೇಕ್ ವೈಫಲ್ಯವಾದರೂ, ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬಹುದಾಗಿದ್ದ ಭಾರೀ ಅಪಾಯವೊಂದು ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಶಿರಹಟ್ಟಿ ಯಿಂದ ಮುಂಡರಗಿ ಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಬಾಗೇವಾಡಿ ಗ್ರಾಮದ ಬಳಿ ಬಸ್ ಬ್ರೇಕ್ ವೈಫಲ್ಯವಾಗಿತ್ತು. ತಕ್ಷಣ ಎಚ್ವೆತ್ತುಕೊಂಡ ಬಸ್ ಚಾಲಕ ಸಿದ್ದಪ್ಪ ಗುದ್ದಿನ್, ರಸ್ತೆಗೆ ಹೊಂದಿಕೊಂಡಿರುವ ಗುಡ್ಡಕ್ಕೆ ಬಸ್ ಏರಿಸಿದ್ದಾರೆ.

ಇದರಿಂದ ಬಸ್ ನ ವೇಗ ಕ್ರಮೇಣ ಕಡಿಮೆಯಾಗಿ ನಿಂತಿದೆ. ಬಳಿಕ ಮತ್ತೊಂದು ಬಸ್ ನಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ. ಬಸ್ ಚಾಲಕನ ಚಾಣಾಕ್ಷತನಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

error: Content is protected !!