ಬಿ ಎಸ್ ಎನ್ ಎಲ್ ಇನ್ನು 4 ಜಿ ವೈರ್ ಲೆಸ್ ಸೇವೆ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ : ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ - BC Suddi
ಬಿ ಎಸ್ ಎನ್ ಎಲ್ ಇನ್ನು 4 ಜಿ ವೈರ್ ಲೆಸ್ ಸೇವೆ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ : ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ

ಬಿ ಎಸ್ ಎನ್ ಎಲ್ ಇನ್ನು 4 ಜಿ ವೈರ್ ಲೆಸ್ ಸೇವೆ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ : ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ

ನವ ದೆಹಲಿ : ಇನ್ನು, ಬಿ ಎಸ್ ಎನ್ ಎಲ್ ಅನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಸಚಿವರು ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ 4 ಜಿ ವೈರ್ ಲೆಸ್ ಸೇವೆಯ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸುತ್ತಿದೆ ಎಂದು ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ ಮಾ.17 ಮಾಹಿತಿ ನೀಡಿದ್ದಾರೆ.

ಬಿ ಎಸ್ ಎನ್ ಎಲ್ ಮುಂಬರುವ 4ಜಿ ಟೆಂಡರ್ ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಾರತೀಯ ಟೆಲಿಕಾಂ ಇಕ್ವಿಪ್ ಮೆಂಟ್ಸ್ ಉತ್ಪಾದಕರಿಂದ ಪೂರ್ವ ನೋಂದಣಿ ಅಥವಾ ಪರಿಕಲ್ಪನೆಯ ಪುರಾವೆ (ಪಿಒಸಿ) ಕೋರಿ ಜನವರಿ 1 ರಂದು ಬಿ ಎಸ್ ಎನ್ ಎಲ್ ಇನ್ವೈಟೆಡ್ ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್ (ಇಒಐ)ನ್ನು ಆಹ್ವಾನಿಸಿತ್ತು ಎಂದು ಧೋತ್ರೆ ಹೇಳಿದ್ದಾರೆ. “ಈ ನಿಟ್ಟಿನಲ್ಲಿ 2017 ರ ಸಾಮಾನ್ಯ ಹಣಕಾಸು ನಿಯಮಗಳ ಕಾಯ್ದೆ 144 (xi) ಒಳಗೊಂಡಂತೆ ಸರ್ಕಾರದ ಅನ್ವಯವಾಗುವ ನಿಯಮಗಳು / ಮಾರ್ಗಸೂಚಿಗಳು / ಸಾರ್ವಜನಿಕ ಖರೀದಿ ಆದೇಶಗಳನ್ನು ಬಿ ಎಸ್ ಎನ್ ಎಲ್ ಅನುಸರಿಸುತ್ತದೆ” ಎಂದು ಧೋತ್ರೆ ಮಾಹಿತಿ ನೀಡಿದ್ದಾರೆ.

 

error: Content is protected !!