ಶಾಕಿಂಗ್ ನ್ಯೂಸ್ :ಕೊರೊನಾದಿಂದ ಗುಣವಾದವರಿಗೆ ಮೆದುಳು ಸಂಬಂಧಿ ಖಾಯಿಲೆಗಳು - BC Suddi
ಶಾಕಿಂಗ್  ನ್ಯೂಸ್ :ಕೊರೊನಾದಿಂದ ಗುಣವಾದವರಿಗೆ ಮೆದುಳು ಸಂಬಂಧಿ ಖಾಯಿಲೆಗಳು

ಶಾಕಿಂಗ್ ನ್ಯೂಸ್ :ಕೊರೊನಾದಿಂದ ಗುಣವಾದವರಿಗೆ ಮೆದುಳು ಸಂಬಂಧಿ ಖಾಯಿಲೆಗಳು

ನ್ಯೂ ಯಾರ್ಕ್ : ಡೆಡ್ಲಿ ಸೋಂಕು ಕೊರೊನಾ ಸೃಷ್ಟಿಸಿರುತ್ತಿರುವ ಅವಾಂತರಗಳು ಒಂದೆರಡಲ್ಲ ಒಂದೊಮ್ಮೆ ಸೋಂಕು ತಗುಲಿದರೆ ಬದುಕುಳಿಯಲು ಹರಸಾಹಸ ಪಡಬೇಕು. ಹಾಗೋ ಹೀಗೋ ಸುಧಾರಿಸಿಕೊಂಡು ಬದುಕಿದವರಿಗೆ ಸದ್ಯ ಬಿಗ್ ಶಾಕಿಂಗ್ ಸುದ್ದಿಯೊಂದು ಆಘಾತ ತಂದಿದೆ.

ಗುಜರಾತ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ 20 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ

ಹೌದು ಕೊರೊನಾ ಸೋಂಕು ತಗುಲಿ ಗುಣಮುಖರಾದವರಲ್ಲಿ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಅಮೆರಿಕನ್ನರ ಮೇಲೆ ನಡೆಸಿದ ಅಧ್ಯಯನದಲ್ಲಿ, ಮೂರು ರೋಗಿಗಳಲ್ಲಿ ಒಬ್ಬರಿಗೆ ಆರು ತಿಂಗಳೊಳಗೆ ಒತ್ತಡ, ಖಿನ್ನತೆ, ಪಾರ್ಶ್ವವಾಯು, ಡಿಮೆಂಷಿಯದಂತಹ ಸಮಸ್ಯೆಗಳು ಉಂಟಾಗಿರುವುದು ಕಂಡುಬಂದಿದೆ ಎನ್ನಲಾಗಿದೆ.

ಬಹುತೇಕ ಅಮೇರಿಕದವರೇ ಆದ ಒಟ್ಟು 2,36,379 ಕರೊನಾ ರೋಗಿಗಳ ಆರೋಗ್ಯ ದಾಖಲೆಗಳನ್ನು ಫ್ಲೂ ಮತ್ತು ಇತರ ಶ್ವಾಸಕೋಶದ ಸೋಂಕುಗಳನ್ನು ಹೊಂದಿದ ರೋಗಿಗಳಿಗೆ ಹೋಲಿಸಿ, ವಿಶ್ಲೇಷಿಸಲಾಯಿತು. ಇವರಲ್ಲಿ ಶೇ. 34 ರಷ್ಟು ಜನರು ಆರು ತಿಂಗಳೊಳಗೆ ನರರೋಗಗಳು ಅಥವಾ ಮನೋವೈದ್ಯಕೀಯ ಖಾಯಿಲೆಗಳಿಗೆ ಈಡಾಗಿದ್ದುದು ಕಂಡುಬಂತು ಎಂದು ಲ್ಯಾನ್ಸೆಟ್ ಸೈಕಿಯಾಟ್ರಿ ಜರ್ನಲ್ ನಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನ ವರದಿ ತಿಳಿಸಿದೆ.

ಕೊರೊನಾ ವೈರಸ್ಗೂ ಮಾನಸಿಕ ಅಸ್ವಸ್ಥತೆಗೂ ಏನು ಲಿಂಕ್ ಎಂಬುದು ಸ್ಪಷ್ಟವಾಗದಿದ್ದರೂ, ಈ ಸಮಸ್ಯೆಗಳು 14 ಖಾಯಿಲೆಗಳ ಹೋಲಿಕೆಯಲ್ಲಿ ಅತಿಹೆಚ್ಚಾಗಿ ಕಂಡುಬಂದಿವೆ. ಒತ್ತಡ ಮತ್ತು ಖಿನ್ನತೆ ಅಮೆರಿಕದಲ್ಲಿ ಕಕೊರೊನಾದಿಂದ ಗುಣಮುಖರಾದ ಜನರಲ್ಲಿ ಸಾಮಾನ್ಯವಾಗಿ ಕಂಡುಬಂದಿರುವುದರಿಂದ, ಈ ಮಹಾಮಾರಿಯ ಕಾರಣದಿಂದ ಮಾನಸಿಕ ಅಸ್ವಸ್ಥತೆಯ ಅಲೆ ಏಳಲಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

error: Content is protected !!