ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಧೂಶಕ, ಜೋಕರ್ ಇದ್ದ ಹಾಗೆ :  ಸಿದ್ದರಾಮಯ್ಯ - BC Suddi
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಧೂಶಕ, ಜೋಕರ್ ಇದ್ದ ಹಾಗೆ :  ಸಿದ್ದರಾಮಯ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಧೂಶಕ, ಜೋಕರ್ ಇದ್ದ ಹಾಗೆ :  ಸಿದ್ದರಾಮಯ್ಯ

ಕೊಪ್ಪಳ: “ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಧೂಶಕ, ಜೋಕರ್ ಇದ್ದ ಹಾಗೆ” ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಮಂಗಳಾ ಅಂಗಡಿಗೆ ಅವಮಾನ ಮಾಡಿಲ್ಲ ಸುರೇಶ್ ಅಂಗಡಿನೇ ನಮ್ಮ ಪಾಲಿನ ಹಣ ಕೇಳಿಲ್ಲ, ಇನ್ನು ಈ ಅಮ್ಮ ಏನ್ ಕೇಳ್ತಾರೆ ಎಂದಿದ್ದೆ. ಆದರೆ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ, ಮಾಡದ ತಪ್ಪಿಗೆ ನಾನೇಕೆ ಕ್ಷಮೆ ಕೇಳಬೇಕು” ಎಂದರು.

ಇನ್ನು ನಾನು ಅವಮಾನ ಮಾಡಿದಂತೆ ಮಾತಾಡಿಲ್ಲ. ಅವರು ಏನಾದ್ರೂ ಹೇಳಬಹುದು ಎಂದು ನಳೀನ್ ಕುಮಾರ್ ತಲೆ ಹಿಡುಕ ಹೇಳಿಕೆಗೆ ತಿರುಗೇಟು‌ ನೀಡಿದರು.

ಕೊರೊನಾ ಹೆಚ್ಚಳದ ಹಿನ್ನಲೆಯಲ್ಲಿ ಲಾಕಡೌನ್ ಕುರಿತು ಪ್ರತಿಕ್ರಿಯಿಸಿದ ಅವರು, “ಲಾಕಡೌನ್ ನಿಂದ ಪರಿಹಾರ ಆಗಲ್ಲ‌, ನಿನ್ನೆ ಒಂದೇ ದಿನ ಒಂದು ಸಾವಿರ ಕೇಸ್ ಬಂದಿದ್ದು, ಬಾರ್ಡರ್ ಗಳಲ್ಲಿ ಟೆಸ್ಟ್ ಮಾಡ್ತಿಲ್ಲ, ಮಹಾರಾಷ್ಟ್ರ, ಕೇರಳದಿಂದ ಜನ ಬರ್ತಿದ್ದಾರೆ. ಅವರನ್ನ ಟೆಸ್ಟ್ ಮಾಡಲ್ಲ ಬದಲಾಗಿ ಸರ್ಕಾರ ದುಡ್ಡು ಹೊಡೆಯೋದ್ರಲ್ಲಿ ಕಾಲಹರಣ ಮಾಡುತ್ತಿದೆ” ಎಂದು ಹೇಳಿದ್ದಾರೆ.

 ಹೆಲ್ಮೆಟ್ ಧರಿಸದೇ ತ್ರಿಬಲ್​ ರೈಡಿಂಗ್​ ನಲ್ಲಿ ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋದ ಮೂವರು ಮಹಿಳಾ ಕಾನ್ಸ್​ಟೆಬಲ್​ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ