ಮೊದಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮೂವರು ಶಾಸಕರ ಟೀಂ ಅನ್ನು ಬಂಧಿಸಬೇಕು : ಡಿ.ಕೆ.ಶಿವಕುಮಾರ್ - BC Suddi
ಮೊದಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮೂವರು ಶಾಸಕರ ಟೀಂ ಅನ್ನು ಬಂಧಿಸಬೇಕು : ಡಿ.ಕೆ.ಶಿವಕುಮಾರ್

ಮೊದಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮೂವರು ಶಾಸಕರ ಟೀಂ ಅನ್ನು ಬಂಧಿಸಬೇಕು : ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮು ಆಯಾಮವನ್ನು ನೀಡುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮೂವರು ಶಾಸಕರ ಟೀಂ ಅನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೊರೊನಾ ವಾರ್ ರೂಂ ಗೆ ಹೋಗಿ ಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆದ ತೇಜಸ್ವಿ ಸೂರ್ಯ ಕೇವಲ ಮುಸ್ಲಿಂ ಹೆಸರನ್ನು ಮಾತ್ರ ಓದಿ ಹೇಳುವ ಮೂಲಕ ಪ್ರಕರಣಕ್ಕೆ ಕೋಮು ಆಯಾಮದ ಬಣ್ಣ ನೀಡುತ್ತಿದ್ದು, ವಾರ್ ರೂಂ ನಲ್ಲಿ ಮುಸ್ಲಿಂ ಸಮುದಾಯದವರು ಬಿಟ್ಟರೆ ಬೇರೆ ಯಾರೂ ಇರಲಿಲ್ಲವೇ? ಮೊದಲು ತೇಜಸ್ವಿ ಸೂರ್ಯ ಹಾಗೂ ಅವರ ಟೀಂ ನ್ನು ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಕರ್ನಾಟಕದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರಿ ಹೋಗಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ವಿಫಲವಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋದ ಸೋಂಕಿತರು ವಾಪಸ್ ಬರುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋದವರು ವಾಪಸ್ ಬರುತ್ತಿಲ್ಲ. ಮುಖ್ಯಮಂತ್ರಿ 3 ದಿನಗಳಲ್ಲಿ ಕೊರೊನಾದಿಂದ ಮುಕ್ತರಾಗಿ ಬರುತ್ತಿದ್ದಾರೆ. ನಾನು ಕೂಡ ಕೊರೊನಾದಿಂದ ಮುಕ್ತನಾಗಿ ಬಂದಿದ್ದೇನೆ. ಆದರೆ ಸರ್ಕಾರಿ ಆಸ್ಪತ್ರೆಗೆ ದಾಖಲಾದವರು ಸತ್ತೇ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಯಡಿಯೂರಪ್ಪನವರು ಮೊದಲು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗಳನ್ನು ಕರೆದು ಮಾತನಾಡಬೇಕು” ಎಂದಿದ್ದಾರೆ.

ಇನ್ನು “ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯನ್ನು ಸಂದೀಪ್ ಪಾಟೀಲ್ ಅವರಿಗೆ ಒಪ್ಪಿಸಲಾಗಿದ್ದು, ನಮಗೆ ಸಂದೀಪ್ ಪಾಟೀಲ್ ಸೇರಿದಂತೆ ಯಾರ ಮೇಲೂ ನಂಬಿಕೆಯಿಲ್ಲ. ಮುಖರ್ಜಿ ಮೇಲೂ ನಂಬಿಕೆಯಿಲ್ಲ, ಅನುಚೇತ್ ಮೇಲೂ ಇಲ್ಲ” ಎಂದು ಹೇಳಿದ್ದಾರೆ.

 ಹೊಸ ಹೆಸರಿನ ಮೂಲಕ ಭಾರತಕ್ಕೆ ರೀ ಎಂಟ್ರಿಕೊಟ್ಟ ಪಬ್ಜಿ