ಪ್ರತಿಭಟನಾ ನಿರತ ರೈತರಿಂದ ಬಿಜೆಪಿ ಶಾಸಕನಿಗೆ ಥಳಿತ : ವಿಡಿಯೋ ವೈರಲ್ - BC Suddi
ಪ್ರತಿಭಟನಾ ನಿರತ ರೈತರಿಂದ ಬಿಜೆಪಿ ಶಾಸಕನಿಗೆ ಥಳಿತ : ವಿಡಿಯೋ ವೈರಲ್

ಪ್ರತಿಭಟನಾ ನಿರತ ರೈತರಿಂದ ಬಿಜೆಪಿ ಶಾಸಕನಿಗೆ ಥಳಿತ : ವಿಡಿಯೋ ವೈರಲ್

ಚಂಡೀಗಢ: ಅಬೊಹರ್ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ನಾರಂಗ್ ಸೇರಿದಂತೆ ಇತರೆ ಸ್ಥಳೀಯರ ನಾಯಕರನ್ನು ಒಂದು ಗುಂಪಿನ ಪ್ರತಿಭಟನಾನಿರತ ರೈತರು ಹಿಗ್ಗಾಮುಗ್ಗ ತಳಿಸಿದ ಘಟನೆ ಪಂಜಾಬ್ ನ ಮುಕ್ತ್ ಸರ್ ಜಿಲ್ಲೆಯ ಮಲೌತ್ ನಲ್ಲಿ ಶನಿವಾರ ನಡೆದಿದೆ.

ಶಾಸಕರ ಬಟ್ಟೆ ಹರಿದು, ಅವರ ಮೇಲೆ ಕಪ್ಪು ಮಸಿ ಸುರಿದು ಕ್ರೌರ್ಯತೆ ಮೆರೆದಿದ್ದಾರೆ. ಶಾಸಕರು ಮಲೌತ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸುವಾಗ ಈ ದುರ್ಘಟನೆ ನಡೆದಿದೆ.

ಅರುಣ್ ನಾರಂಗ್ ಆಗಮನಕ್ಕಾಗಿ ಪ್ರತಿಭಟನಾಕಾರರು ಅವರ ಮೇಲೆ ಹಲ್ಲೆ ಮಾಡಿದೆ. ಸ್ಥಳದಲ್ಲಿದ್ದ ಕೆಲ ಪೊಲೀಸರು ಶಾಸಕರು ಮತ್ತು ಸ್ಥಳೀಯ ನಾಯಕರುಗಳನ್ನು ಹತ್ತಿರದ ಅಂಗಡಿಯೊಂದಕ್ಕೆ ಕರೆದೊಯ್ದರು. ಅಲ್ಲಿಂದ ಹೊರಬಂದಾಗ ಅರುಣ್ ನಾರಂಗ್ ಮತ್ತವರ ಬೆಂಬಲಿಗರನ್ನು ಹಿಡಿದು ರೈತರು ಥಳಿಸಿ, ಬಟ್ಟೆ ಹರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಪ್ರತಿಭಟನಾಕಾರರ ವಿರುದ್ಧ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭವಾಗಿದ್ದು, ಹಲ್ಲೆ ಮಾಡಿದವರ ಗುರು ಪತ್ತೆ ಕಾರ್ಯ ನಡೆಯುತ್ತಿದೆ.

ಇನ್ನು ಈ ಘಟನೆಯನ್ನು ಅಕಾಲಿದಳ ಮತ್ತು ಕಾಂಗ್ರೆಸ್ ಖಂಡಿಸಿದೆ.

ತಡರಾತ್ರಿ ಬೆಂಗಳೂರಿಂದ ಬೆಳಗಾವಿಗೆ ಸಿಡಿ ಲೇಡಿ ಪೋಷಕರು

error: Content is protected !!