ಲಕ್ನೋ: ಕೋವಿಡ್‌ಗೆ ಬಿಜೆಪಿ ಶಾಸಕ ಸುರೇಶ್ ಶ್ರೀವಾತ್ಸವ್ ಬಲಿ - BC Suddi
ಲಕ್ನೋ: ಕೋವಿಡ್‌ಗೆ ಬಿಜೆಪಿ ಶಾಸಕ ಸುರೇಶ್ ಶ್ರೀವಾತ್ಸವ್ ಬಲಿ

ಲಕ್ನೋ: ಕೋವಿಡ್‌ಗೆ ಬಿಜೆಪಿ ಶಾಸಕ ಸುರೇಶ್ ಶ್ರೀವಾತ್ಸವ್ ಬಲಿ

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಪಶ್ಚಿಮ ಕ್ಷೇತ್ರದ ಶಾಸಕ ಸುರೇಶ್ ಶ್ರೀವಾತ್ಸವ್ (76) ಕೋವಿಡ್‌ಗೆ ಬಲಿಯಾಗಿದ್ದಾರೆ. ಸುರೇಶ್ ಶ್ರೀವಾತ್ಸವ್ ಅವರಿಗೆ 15 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರ ಸಂಪರ್ಕದಲ್ಲಿದ್ದ ಸಚಿವರು ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದರು.

ಸುರೇಶ್ ಶ್ರೀವಾತ್ಸವ್ ಅವರನ್ನು ಕಳೆದ ಏಳು ದಿನಗಳಿಂದ ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿ ಎಲ್ಲ ನಾಯಕರು ಸುರೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಆರ್‍ಎಸ್‍ಎಸ್ ಹಿನ್ನೆಲೆಯುಳ್ಳವರಾಗಿದ್ದ ಸುರೇಶ್ ಶ್ರೀವಾತ್ಸವ್ ಅನುಭವಿ ರಾಜಕಾರಣಿ. ಸುರೇಶ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಕಂಬನಿ ಮಿಡಿದಿದ್ದಾರೆ.

ಸುಪ್ರೀಂ ಕೋರ್ಟ್‌ನ 48ನೇ ನ್ಯಾಯಮೂರ್ತಿಯಾಗಿ ಇಂದು ಎನ್‌.ವಿ ರಮಣ ಪ್ರಮಾಣ ವಚನ ಸ್ವೀಕಾರ