'ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಆರ್ತನಾದಕ್ಕೆ ಬೆಲೆಯೇ ಇಲ್ಲ' - ಕಾಂಗ್ರೆಸ್‌ - BC Suddi
‘ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಆರ್ತನಾದಕ್ಕೆ ಬೆಲೆಯೇ ಇಲ್ಲ’ – ಕಾಂಗ್ರೆಸ್‌

‘ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಆರ್ತನಾದಕ್ಕೆ ಬೆಲೆಯೇ ಇಲ್ಲ’ – ಕಾಂಗ್ರೆಸ್‌

ಬೆಂಗಳೂರು : ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ವಿರುದ್ದ ಟೀಕೆ ಮಾಡಿರುವ ಕಾಂಗ್ರೆಸ್‌, ”ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಆರ್ತನಾದಕ್ಕೆ ಬೆಲೆಯೇ ಇಲ್ಲ” ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ”ಸಿಡಿಯಲ್ಲಿರುವ ಯುವತಿ,ಅಸಹಾಯಕಳು, ನನಗೆ ಬೆದರಿಕೆ ಇದೆ, ಉದ್ಯೋಗ ಕೊಡುಸುವುದಾಗಿ ಹೇಳಿ ನನ್ನ ದುರ್ಬಳಕೆ ಮಾಡಿಕೊಳ್ಳಲಾಯಿತು, ನನಗೆ ರಕ್ಷಣೆ ಬೇಕು ಎಂದು ಬೇಡಿಕೊಂಡರೂ ಈ ಸರ್ಕಾರ ಯುವತಿಯ ಆಯಾಮದಲ್ಲಿ ತನಿಖೆ ನಡೆಸುತ್ತಿಲ್ಲ. ರಕ್ಷಣೆ ನೀಡುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದೆ. ಹಾಗೆಯೇ ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಆರ್ತನಾದಕ್ಕೆ ಬೆಲೆಯೇ ಇಲ್ಲ” ಎಂದು ಟೀಕಿಸಿದೆ.

ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಏತನ್ಮಧ್ಯೆ ಯುವತಿ ಜಾರಕಿಹೊಳಿ ಕೆಲಸಕೊಡಿಸುವುದಾಗಿ ಹೇಳಿ ತನ್ನನ್ನು ಬಳಸಿಕೊಂಡಿದ್ದಾರೆ. ಅವರೇ ಸಿಡಿ ಲೀಕ್‌ ಮಾಡಿದ್ದಾರೆ ಎಂದು ದೂರಿ ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ ದಿಢೀರನ್ನೇ ಯುವತಿ ನಾಪತ್ತೆಯಾಗಿದ್ದಾಳೆ. ಆಕೆಯ ತಂದೆ, ನನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಹೇಳಿದ್ದರೂ, ಆಕೆ ತಪ್ಪಿಸಿಕೊಂಡು ಗಂಟೆಗೊಮ್ಮೆ ಸ್ಥಳ ಬದಲಾಯಿಸುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.

 

 

 

 

 

error: Content is protected !!