ಪ್ರತಿಯೊಬ್ಬರೂ ಬಿಲ್‌ ಪಾವತಿಸುತ್ತಾರೆ : ಪಾವತಿ ವಿಚಾರ ರಾಜಕೀಯಗೊಳಿಸಿದ ತೇಜಸ್ವಿಯನ್ನು ಖಂಡಿಸಿದ ರೆಸ್ಟೋರೆಂಟ್‌ - BC Suddi
ಪ್ರತಿಯೊಬ್ಬರೂ ಬಿಲ್‌ ಪಾವತಿಸುತ್ತಾರೆ : ಪಾವತಿ ವಿಚಾರ ರಾಜಕೀಯಗೊಳಿಸಿದ ತೇಜಸ್ವಿಯನ್ನು ಖಂಡಿಸಿದ ರೆಸ್ಟೋರೆಂಟ್‌

ಪ್ರತಿಯೊಬ್ಬರೂ ಬಿಲ್‌ ಪಾವತಿಸುತ್ತಾರೆ : ಪಾವತಿ ವಿಚಾರ ರಾಜಕೀಯಗೊಳಿಸಿದ ತೇಜಸ್ವಿಯನ್ನು ಖಂಡಿಸಿದ ರೆಸ್ಟೋರೆಂಟ್‌

ಕೊಯಮತ್ತೂರು : ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಬಂದಿರುವ ಬೆಂಗಳೂರು (ದಕ್ಷಿಣ) ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸಿದ ನಂತರ ತಮ್ಮ ಬಿಲ್ ಪಾವತಿಗೆ ಸಂಬಂಧಿಸಿದ ಘಟನೆಯಿಂದ ಸ್ವಲ್ಪ ರಾಜಕೀಯ ಮೈಲೇಜ್ ಪಡೆಯುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಸಂಸದನ ಈ ನಡೆಯನ್ನು ರೆಸ್ಟೋರೆಂಟ್‌ ಖಂಡಿಸಿದ್ದು ತೇಜಸ್ವಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದೆ.

ಗುರುವಾರ, ತೇಜಸ್ವಿ ಸೂರ್ಯ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ”ಇಂದು ರೆಸ್ಟೋರೆಂಟ್‌ನಲ್ಲಿ ಉಪಹಾರದ ನಂತರ, ನಾನು ಸ್ವಾಭಾವಿಕವಾಗಿ ಬಿಲ್‌ ಪಾವತಿಸಲು ಹೋದೆ. ಆದರೆ ಹೊಟೇಲ್‌ ಕ್ಯಾಷಿಯರ್ ಹಣವನ್ನು ಸ್ವೀಕರಿಸಲು ಹಿಂಜರಿದರು. ನಾನು ಒತ್ತಾಯ ಮಾಡಿದ ಬಳಿಕ ಬಹಳ ಹಿಂಜರಿಕೆಯಿಂದ ಬಿಕ್‌ ಪಡೆದರು. ನಾವು ಬಿಜೆಪಿಯವರು. ಎಲ್ಲರನ್ನು ಗೌರವಿಸುವ ಮತ್ತು ಎಲ್ಲರನ್ನೂ ರಕ್ಷಿಸುವ ಪಕ್ಷ. ಸಣ್ಣ ವ್ಯವಹಾರಗಳಿಂದಲೂ ರೋಲ್-ಕಾಲ್ ಮಾಡಲು ಡಿಎಂಕೆ ಅಲ್ಲ ಎಂದು ನಾನು ಅವನಿಗೆ ಹೇಳಿದೆ” ಎಂದು ಉಲ್ಲೇಖಿಸಿದ್ದರು.

ಈ ಟ್ವೀಟ್‌ಗೆ ತನ್ನ ಫೇಸ್‌ಬುಕ್ ಮೂಲಕ ತಿರುಗೇಟು ನೀಡಿರುವ ಅನ್ನಪೂರ್ಣ ರೆಸ್ಟೋರೆಂಟ್‌, ”ಆತ್ಮೀಯ ತೇಜಸ್ವಿ ಸೂರ್ಯ ಅವರೇ ನಮ್ಮ ರೆಸ್ಟೋರೆಂಟ್‌ನಲ್ಲಿ ನಿಮಗೆ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ, ವಾಸ್ತವವಾಗಿ ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಯಾರೂ ನಮ್ಮಲ್ಲಿ ಉಚಿತವಾಗಿ ನೀಡಲು ಒತ್ತಾಯಿಸಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ತೆಗೆದುಕೊಳ್ಳಲ್ಲ” ಎಂದು ಹೇಳಿದೆ.

error: Content is protected !!