ವಿಚ್ಛೇದನ ಘೋಷಿಸಿದ ಬಿಲ್‌ ಗೇಟ್ಸ್‌-ಮೆಲಿಂಡಾ ದಂಪತಿ: 27 ವರ್ಷಗಳ ದಾಂಪತ್ಯ ಜೀವನ ಅಂತ್ಯ - BC Suddi
ವಿಚ್ಛೇದನ ಘೋಷಿಸಿದ ಬಿಲ್‌ ಗೇಟ್ಸ್‌-ಮೆಲಿಂಡಾ ದಂಪತಿ: 27 ವರ್ಷಗಳ ದಾಂಪತ್ಯ ಜೀವನ ಅಂತ್ಯ

ವಿಚ್ಛೇದನ ಘೋಷಿಸಿದ ಬಿಲ್‌ ಗೇಟ್ಸ್‌-ಮೆಲಿಂಡಾ ದಂಪತಿ: 27 ವರ್ಷಗಳ ದಾಂಪತ್ಯ ಜೀವನ ಅಂತ್ಯ

ವಾಷಿಂಗ್ಟನ್‌: ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್‌ ಮತ್ತು ಮೆಲಿಂಡಾ ಗೇಟ್ಸ್‌ ದಂಪತಿ ವಿವಾಹವಾದ 27 ವರ್ಷಗಳ ಬಳಿಕ ತಮ್ಮ ದಾಂಪತ್ಯದ ಜೀವನಕ್ಕೆ ಕೊನೆ ಹೇಳುವುದಾಗಿ ತಿಳಿಸಿದ್ದಾರೆ. ವಿಶ್ವದ ಶ್ರೀಮಂತ ದಂಪತಿಗಳಲ್ಲಿ ಒಂದಾದ ಈ ದಂಪತಿಗಳು ಈಗ ವಿಚ್ಛೇದನ ಘೋಷಿಸಿದ್ದಾರೆ.

ಈ ಬಗ್ಗೆ ಬಿಲ್‌ ಗೇಟ್ಸ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ”ನಾವು ನಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿ‌ದ್ದೇವೆ. 27 ವರ್ಷಗಳ ದಾಂಪತ್ಯ ಜೀವನದಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದೇವೆ. ಹಾಗೆಯೇ ಜಾಗತಿಕ ಆರೋಗ್ಯ, ಲಿಂಗ ಸಮಾನತೆ, ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುವ ಪೌಂಡೇಶನ್‌ ಸ್ಥಾಪಿಸಿದ್ದೇವೆ. ನಾವು ವಿಚ್ಛೇಧನದ ಬಳಿಕವೂ ನಮ್ಮ ಸಾಮಾಜಿಕ ಕಾರ್ಯವನ್ನು ಪೌಂಡೇಶನ್‌ನಲ್ಲಿ ಜೊತೆಯಾಗಿಯೇ ನಿರ್ವಹಿಸುತ್ತೇವೆ. ಆದರೆ ನಾವು ದಂಪತಿಗಳಾಗಿ ಇನ್ನು ಮುಂದೆ ಜೊತೆಯಾಗಿ ಇರಲಾರೆವು” ಎಂದು ಬಿಲ್ ಗೇಟ್ಸ್‌ ಮತ್ತು ಮೆಲಿಂಡಾ ಗೇಟ್ಸ್‌ ಅವರ ಜಂಟಿ ಹೇಳಿಕೆ ಪ್ರತಿಯನ್ನು ಬಿಲ್‌ ಗೇಟ್ಸ್‌ ಟ್ವೀಟ್‌ ಮಾಡಿದ್ದಾರೆ.

ವಿಶ್ವದ ಶ್ರೀಮಂತ ದಂಪತಿಗಳಲ್ಲಿ ಒಂದಾದ ಈ ದಂಪತಿಗಳ ಜಂಟಿ ಸಂಪತ್ತನ್ನು 13,000 ಕೋಟಿ ಡಾಲರ್ ಇದೆ ಎಂದು ಅಂದಾಜಿಸಲಾಗಿದೆ. ಬಿಲ್‌ ಗೇಟ್ಸ್‌ ಅವರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್‌ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ.

 

ಕೊರೊನಾ ಪ್ರಕರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅಗತ್ಯ ಸೌಕರ್ಯ ಒದಗಿಸಲು ನೋಡಲ್ ಅಧಿಕಾರಿ ನೇಮಕ : ರಾಜ್ಯ ಸರ್ಕಾರದ ಆದೇಶ