ಸಣ್ಣ ವಿಚಾರಕ್ಕೆ ದೊಡ್ಮನೆಯಲ್ಲಿ ಮಂಜು-ಪ್ರಶಾಂತ್ ಮಧ್ಯೆ ವಾಕ್ಸಮರ.! - BC Suddi
ಸಣ್ಣ ವಿಚಾರಕ್ಕೆ ದೊಡ್ಮನೆಯಲ್ಲಿ ಮಂಜು-ಪ್ರಶಾಂತ್ ಮಧ್ಯೆ ವಾಕ್ಸಮರ.!

ಸಣ್ಣ ವಿಚಾರಕ್ಕೆ ದೊಡ್ಮನೆಯಲ್ಲಿ ಮಂಜು-ಪ್ರಶಾಂತ್ ಮಧ್ಯೆ ವಾಕ್ಸಮರ.!

ಬಿಗ್‌ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತ ಮೆಚ್ಚುಗೆ ಗಳಿಸಿಕೊಂಡ ಲ್ಯಾಗ್ ಮಂಜು ಹಾಗೂ ದೊಡ್ಮನೆ ಮಾವ ಪ್ರಶಾಂತ್ ಸಂಬರಗಿ ಒಂದು ಸಣ್ಣ ವಿಚಾರಕ್ಕೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

ಹೌದು. ಬಿಗ್‌ಬಾಸ್ ಮನೆಯಲ್ಲಿ ಈಗ ಚದುರಂಗದ ಟಾಸ್ಕ್ ಕೊಡಲಾಗಿದೆ. ಒಂದು ತಂಡದವರು ಬಿಳಿ ಬಣ್ಣದ ಕಾಯಿಗಳಾದರೆ, ಇನ್ನೊಂದು ತಂಡದವರು ಕಪ್ಪು ಬಣ್ಣದ ಕಾಯಿಗಳಾಗಿರುತ್ತಾರೆ. ‘ಬಿಗ್ ಬಾಸ್’ ಪ್ರತಿ ಹಂತದಲ್ಲೂ ನೀಡುವ ಟಾಸ್ಕ್‌ನಲ್ಲಿ ಸೋತವರು ಪಂದ್ಯದಿಂದ ಹೊರಗುಳಿಯಬೇಕು. ಗೇಮ್‌ ನಡೆಯುವಾಗ ಆಡುವವನು ಮಾತ್ರ ಹೊರಗಿರಬೇಕು. ಮಿಕ್ಕವರು ಮನೆಯೊಳಗೆ ಇರಬೇಕು. ಆದರೆ ಈ ವಿಚಾರವಾಗಿ ಪ್ರಶಾಂತ್ ರೂಲ್ಸ್ ಬ್ರೇಕ್ ಮಾಡಿದರು ಎಂಬುದು ಮಂಜು ಆರೋಪಿಸಿ ಜಗಳಕ್ಕೆ ಇಳಿದು ಬಿಟ್ಟರು.

ಮೊದಲು ಮಾತು ಆರಂಭಿಸಿದ ಮಂಜು, ಅವರು ಹೇಳುವುದಕ್ಕೂ ಮುಂಚೆ ನೀನು ಹೊರಗೆ ಯಾಕೆ ಬಂದೆ ಮಾವ? ಫೌಲ್ ಎಂದಿದ್ದರೆ ಏನ್‌ ಮಾಡ್ತಿದ್ದೆ ನೀನು ಎಂದು ಪ್ರಶ್ನಿಸಿದರು. ಆಗ ಪ್ರಶಾಂತ್, ಅವರು ಹೇಳಿದ್ದಕ್ಕೆ ಬಂದಿದ್ದು ಎಂದು ಉತ್ತರಿಸಿದರು.

ದೇಶದಲ್ಲಿ 5.21 ಕೋಟಿ ಮಂದಿಗೆ ಕೊವಿಡ್-19 ಲಸಿಕೆ ವಿತರಣೆ

ಎಲ್ಲದನ್ನು ಉದಾಸೀನ ಮಾಡಬೇಡಿ ಮಾವ. ಅನೌನ್ಸ್ ಮಾಡೋಕು ಮುಂಚೆ ಯಾಕೆ ಬಂದ್ರಿ..? ಇದರ ಮೇಲೆ ಏನೂ ಹೇಳೋಕೆ ಆಗಲ್ಲ, ನಿಮ್ಮಿಷ್ಟ ಎಂದು ಮಂಜು ಅಸಮಾಧಾನ ಹೊರ ಹಾಕಿದರು. ಈ ವೇಳೆ ಕೆರಳಿದ ಪ್ರಶಾಂತ್, ಕೇಳ್ಕೊಂಡೆ ಬಂದಿದ್ದು ಬಿಡಪ್ಪ. ಯಾಕೋ ಅಷ್ಟು ತಲೆ ಕೆಡಿಸಿಕೊಳ್ತೀಯಾ? ಬುದ್ಧಿವಂತ ಆಗೋಕೆ ಹೋಗಬೇಡ. ನನ್ನದು ತಪ್ಪಿದ್ದರೆ ಬಿಗ್ ಬಾಸ್ ಹೇಳ್ತಾರೆ ಬಿಡು. ನೀ ಯಾಕೆ ತಲೆ ಕೆಡಿಸಿಕೊಳ್ತೀಯಾ? ದಿವ್ಯಾ ಸುರೇಶ್, ಹತ್ತು ಆಯ್ತು ಅಂದ್ಲು, ಬಂದೆ ಎಂದರು.

ಕೊಂಚ ಕೋಪಗೊಂಡ ಮಂಜು, ಇಲ್ಲಿ ಬಿಗ್‌ಬಾಸ್ ದಿವ್ಯಾ ಸುರೇಶ್ ಅಲ್ಲ. ಅನೌನ್ಸ್ ಆಗೋದಕ್ಕಿಂತ ಮುಂಚೆ ಹೊರಗೆ ಬರಬಾರದು ಅಲ್ವಾ ಎಂದು ಪ್ರಶ್ನಿಸಿದರು. ಆಗ ಪ್ರಶಾಂತ್, ನನಗೆ ರೂಲ್ಸ್ ಗೊತ್ತಲ್ವಾ? ಯಾಕಷ್ಟು ಹೈಲೈಟ್ ಮಾಡ್ತೀಯಾ? ತಲೆ ಏನಾದರೂ ಕೆಟ್ಟಿದೀಯಾ ನಿಂಗೆ? ನಂಗೂ ಜವಾಬ್ದಾರಿ ಇದೆ. ನಿಂಗೆ ಮಾತ್ರ ಜವಾಬ್ದಾರಿ ಇದೆ ಎಂದುಕೊಳ್ಳಬೇಡ. ಅರ್ಥ ಮಾಡ್ಕೋ ಮಂಜು, ಬೆಳಗ್ಗೆಯಿಂದ ಹೇಳ್ತಾ ಇದ್ದೀಯಾ. ಸರಿ ಇರಲ್ಲ, ಹೇಳ್ತಾ ಇದ್ದೀನಿ ಎಂದು ಏರು ಧ್ವನಿಯಲ್ಲಿ ಅವಾಜ್ ಹಾಕಿದರು.

ಪ್ರಶಾಂತ್ ಅವಾಜ್‌ಗೆ ಕೆಂಡಾಮಂಲವಾದ ಮಂಜು, ಸರಿ ಇರಲ್ಲ ಅಂತ ಬೆರಳು ತೋರಿಸಿ ಮಾತನಾಡಬೇಡಿ ನೀವು ಎಂದು ಎಚ್ಚರಿಸಿದರು. ಆಗ ಪ್ರಶಾಂತ್, ಕಸ ಗುಡಿಸುವುದು ನನಗೆ ಗೊತ್ತು. ಅದನ್ನು ನೀನೇನ್ ಹೇಳೋದು. ನಾನು ಸರಿಯಾಗಿಯೇ ಗುಡಿಸಿದ್ದೀನಿ ಎಂದು ಕೂಗಾಡಿದರು. ಬಳಿಕ ಕೋಪದಿಂದ ಗಾರ್ಡನ್ ಏರಿಯಾ ಬಿಟ್ಟು ಅಡುಗೆ ಮನೆಯತ್ತ ಹೋದರು. ಈ ವೇಳೆ ಕ್ಯಾಪ್ಟನ್ ಅರವಿಂದ್ ಸೇರಿದಂತೆ ಉಳಿದ ಮನೆಯ ಸದಸ್ಯರು ಮಂಜುಗೆ ಸಮಾಧಾನ ಮಾಡಿದರು.

error: Content is protected !!