ದೊಡ್ಮನೆಯಲ್ಲಿ ಜೈಲ್ ಸೇರಿದ ಶಂಕರ್ ಅಶ್ವತ್ಥ್! - BC Suddi
ದೊಡ್ಮನೆಯಲ್ಲಿ  ಜೈಲ್ ಸೇರಿದ ಶಂಕರ್ ಅಶ್ವತ್ಥ್!

ದೊಡ್ಮನೆಯಲ್ಲಿ ಜೈಲ್ ಸೇರಿದ ಶಂಕರ್ ಅಶ್ವತ್ಥ್!

ದೊಡ್ಮನೆಯಲ್ಲಿ ಪ್ರತಿವಾರ ಕಳಪೆ ಪ್ರದರ್ಶನ ನೀಡಿದ ಮನೆಯ ಸದಸ್ಯನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ವಾರ ಅತಿ ಹಿರಿಯ ಸ್ಪರ್ಧಿ ಶಂಕರ್ ಅಶ್ವತ್ಥ್ ಅವರನ್ನು ಇತರ ಸ್ಪರ್ಧಿಗಳು ಜೈಲಿಗೆ ತಳ್ಳಿದ್ದಾರೆ.

ಹೌದು. ಶಂಕರ್ ಅಶ್ವತ್ಥ್ ಅವರು ಕಿರಿಯರು ಎಡವಿದಾಗ ಬುದ್ಧಿ ಹೇಳಿ, ಅನುಭವಗಳನ್ನು ಹಂಚಿಕೊಳ್ಳುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಳೆದ ಎರಡು ವಾರಗಳ ಕಾಲ ಎಲಿಮಿನೇಷನ್‌ನಿಂದ ತಪ್ಪಿಸಿಕೊಂಡು, ಸೇಫ್ ಆಗಿದ್ದ ಅವರು ಇದೀಗ ಜೈಲುವಾಸವನ್ನು ಅನುಭವಿಸುತ್ತಿದ್ದಾರೆ.

ಈ ವಾರದ ಕಳಪೆ ಪ್ರದರ್ಶನ ನೀಡಿದ ಸದಸ್ಯನ ಹೆಸರನ್ನು ಸೂಚಿಸಿ ಎಂದು ಬಿಗ್‌ಬಾಸ್‌ ತಿಳಿಸಿತು. ಹೆಚ್ಚಿನ ಸದಸ್ಯರು ಶಂಕರ್ ಅವರ ಹೆಸರನ್ನು ಸೂಚಿಸಿ ವಯಸ್ಸು ಹಾಗೂ ಮತ್ತಿತರ ಕಾರಣಗಳನ್ನು ಕೊಟ್ಟಿದ್ದಾರೆ. ಇದರಿಂದಾಗಿ ಶಂಕರ್‌ ಅಶ್ವತ್ಥ್ ಅವರು ಭಾರೀ ಬೇಸರದಿಂದ ಖೈದಿಯ ಬಟ್ಟೆ ಧರಿಸಿ ಜೈಲುಪಾಲಾಗಿದ್ದಾರೆ.

ಬಿಗ್‌ಬಾಸ್‌ ಎಂಟನೇ ಸೀಸನ್‌ನಲ್ಲಿ ಮೊದಲ ವಾರ ಧನುಶ್ರೀ, 2ನೇ ವಾರ ಶಮಂತ್‍ಗೆ ಶಿಕ್ಷೆಯನ್ನು ನೀಡಲಾಗಿತ್ತು. ಇದೀಗ ಶಂಕರ್ ಅಶ್ವತ್ಥ್ ಜೈಲುವಾಸ ಅನುಭವಿಸಲಿದ್ದಾರೆ. ಜೈಲುವಾಸ ಅನುಭವಿಸುವ ಸ್ಪರ್ಧಿ ಮನೆಗೆ ಬೇಕಾಗುವ ತರಕಾರಿಗಳನ್ನು ಹೆಚ್ಚಿಕೊಡಬೇಕು. ಮನೆಯ ಯಾವುದೇ ಸೌಲಭ್ಯವನ್ನು ಬಳಸುವಂತಿಲ್ಲ.

error: Content is protected !!