ಬಿಗ್ ಬಾಸ್ ಮನೆಯಲ್ಲಿನ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳ ನಡುವೆ ಏನೇ ನಡೆದರೂ ಅದು ಟ್ರೋಲ್ ಆಗುತ್ತೆ. ಹಾಗೂ ಅದರ ಸುತ್ತ ಗಾಸಿಪ್ ಹಬ್ಬಿಕೊಳ್ಳುತ್ತವೆ. ಈ ಬಾರಿಯೂ ಸ್ಪರ್ಧಿಗಳ ನಡುವೆ ಅಂತದ್ದೊಂದು ಟಾಸ್ಕ್ ಏರ್ಪಡಿಸಲಾಗಿತ್ತು. ಅದುವೇ “ನಗುವುದೋ, ಅಳುವುದೋ ನೀವೇ ಹೇಳಿ”.
ಈ ಟಾಸ್ಕ್ ನಿಯಮಾನುಸಾರ ಮನೆಯ ಪುರುಷರೆಲ್ಲರೂ ಮನೆಯಲ್ಲಿರುವ ನಾಲ್ಕು ಮಹಿಳೆಯರ ಪ್ರತಿಕ್ರಿಯೆಯನ್ನು ಪಡೆಯಬೇಕಿತ್ತು. ಅಂದರೆ ಒಂದು ನಗಿಸಬೇಕು, ಇಲ್ಲ ಅಳಿಸಬೇಕು. ನೀಡುವ ನಿಗದಿತ ಅವಧಿಯೊಳಗೆ ನಾಲ್ಕು ಮಹಿಳಾ ಸದಸ್ಯರನ್ನು ನಗಿಸಿದರೆ ಅಥವಾ ಅಳಿಸಿದರೆ ಪುರುಷರು ವಿಜೇತರಾಗುತ್ತಾರೆ.
ಈ ವೇಳೆ ದಿವ್ಯಾ ಉರುಡುಗ ಊಟದಿಂದ ಎದ್ದು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಾರೆ. ಆದರೂ ಹಠ ಬಿಡದ ಮಂಜು ವಾಶ್ ರೂಮ್ಗೆ ತಲುಪಿದ ದಿವ್ಯಾ ಉರುಡುಗರನ್ನು ಬೆನ್ನು ಬೇಡದೇ ಕಾಡುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾ, ಮಂಜು ಬಟ್ಟೆ ಒಗೆಯಲು ಏಕೆ ಬಿಡುತ್ತಿಲ್ಲ ನೀನು ಎಂದು ಪ್ರಶ್ನಿಸುತ್ತಾರೆ. ದಿವ್ಯಾ ಕೈ ಹಿಡಿದು ಎಳೆದು ನಗಿಸಲು ಪ್ರಯತ್ನಿಸುತ್ತಾರೆ. ಆದರೂ ದಿವ್ಯಾ ದೃತಿಗೆಡದೇ ಆಟದ ಮೇಲೆ ಗಮನ ಹರಿಸಲೇಬೇಕೆಂದು ನಗುವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾರೆ.
ನಂತರ ಬಾತ್ ರೂಮ್ನಿಂದ ಹೊರ ಬರುತ್ತಿದ್ದ ದಿವ್ಯಾ ಸುರೇಶ್ ಬೆನ್ನತ್ತಿದ ಲ್ಯಾಗ್ ಮಂಜು, ಆಕೆಯನ್ನು ನಗಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ದಿವ್ಯಾ ನನ್ನ ಬಾಯಲ್ಲಿ ನೀರಿದೆ ನಾನು ಉಗುಳಿ ಬಿಡುತ್ತೇನೆ, ನನ್ನ ಕೈ ಬಿಡು ಎಂದು ಸನ್ನೆ ಮಾಡುವ ಮೂಲಕ ತಿಳಿಸುತ್ತಾರೆ. ಆಗ ಮಂಜು ಆಗಿದ್ದೆಲ್ಲಾ ಆಗಿಲಿ ನೀನು ಉಗುಳಿದರು ಪರವಾಗಿಲ್ಲ ಎಂದು ಹೇಳುವ ಮೂಲಕ ನಗಿಸಲು ಮುಂದಾಗುತ್ತಾರೆ.
ಆದರೂ ನಗಬಾರದೆಂದು ದಿವ್ಯಾ ಬಾಯಿಯಲ್ಲಿದ್ದ ನೀರನ್ನು ಉಗುಳದೇ ಹಾಗೇಯೇ ಮೈನ್ಟೈನ್ ಮಾಡುತ್ತಾರೆ. ನಗಿಸಲೇ ಬೇಕೆಂದು ಹಠ ಬಿಡದ ಮಂಜು ದಿವ್ಯಾರ ಕೈ ಹಿಡಿದು ಎಳೆದಾಡುತ್ತಾರೆ. ಈ ವೇಳೆ ಕೊನೆಗೂ ದಿವ್ಯಾ ಕೊಂಚ ನಗೆ ಬೀರಿಬಿಡುತ್ತಾರೆ. ಇದನ್ನು ಗಮನಿಸಿದ ಬಿಗ್ಬಾಸ್ ದಿವ್ಯಾ ಸುರೇಶ್ ಔಟ್ ಎಂದು ಘೋಷಿಸುತ್ತಾರೆ.