ಬೆಂಗಳೂರು: ಲಾಕ್ ಡೌನ್ ವಿಚಾರದ ಬಗ್ಗೆ ಸಿಎಂಗೆ ನರೇಂದ್ರ ಮೋದಿ ವಾರ್ನಿಂಗ್ ಕೊಟ್ಟದ್ದು ಯಾಕೆ..? - BC Suddi
ಬೆಂಗಳೂರು: ಲಾಕ್ ಡೌನ್ ವಿಚಾರದ ಬಗ್ಗೆ ಸಿಎಂಗೆ ನರೇಂದ್ರ ಮೋದಿ ವಾರ್ನಿಂಗ್ ಕೊಟ್ಟದ್ದು ಯಾಕೆ..?

ಬೆಂಗಳೂರು: ಲಾಕ್ ಡೌನ್ ವಿಚಾರದ ಬಗ್ಗೆ ಸಿಎಂಗೆ ನರೇಂದ್ರ ಮೋದಿ ವಾರ್ನಿಂಗ್ ಕೊಟ್ಟದ್ದು ಯಾಕೆ..?

ಬೆಂಗಳೂರು: ದೇಶದಲ್ಲಿ ಎರಡನೇ ಹಂತದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಸೋಂಕು ಹೆಚ್ಚಾಗಿರುವ ಪ್ರದೇಶದ ಜನರು ಹೆಚ್ಚಿನ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ನಡುವೆ ಕರ್ನಾಟಕದ ಬೆಂಗಳೂರು, ಕಲಬುರಗಿ, ಬೀದರ್ ಗಳನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ.

ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದೇಶದ ಕೊರೋನಾ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿ ಮೋದಿ ವಿಡಿಯೋ ಸಂವಾದ ನಡೆಸಿದ್ದರು. ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಲಾಕ್ ಡೌನ್ ಮತ್ತು ಕರ್ಫ್ಯೂ ಜಾರಿ ಮಾಡಲ್ಲ, ಹೀಗಾಗಿ ಜನರು ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ರಾಜ್ಯದ ಮೇಲೂ ಆಗುತ್ತಿದೆ. ಗಡಿ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಜಿಲ್ಲೆಗಳತ್ತ ನಿಗಾ ಹೊಂದಲು ಪ್ರಧಾನಿ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

error: Content is protected !!