ಬೆಳಗಾವಿ ಉಪ ಚುನಾವಣೆ ಮಂಗಲಾ ಅಂಗಡಿ ಆಸ್ತಿ ಎಷ್ಟಿದೆ ಗೊತ್ತಾ ? - BC Suddi
ಬೆಳಗಾವಿ ಉಪ ಚುನಾವಣೆ ಮಂಗಲಾ ಅಂಗಡಿ ಆಸ್ತಿ ಎಷ್ಟಿದೆ ಗೊತ್ತಾ ?

ಬೆಳಗಾವಿ ಉಪ ಚುನಾವಣೆ ಮಂಗಲಾ ಅಂಗಡಿ ಆಸ್ತಿ ಎಷ್ಟಿದೆ ಗೊತ್ತಾ ?

ಬೆಳಗಾವಿ : ಕಳೆದ ಸೆಪ್ಟೆಂಬರ್‌ನಲ್ಲಿ ಮೃತರಾದ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಸುರೇಶ ಅಂಗಡಿ ಅವರ ವಿರುದ್ಧ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ವಿರುದ್ಧ ನಾಮಪತ್ರ ಸಲ್ಲಿಸಿದ್ದಾರೆ. ಮಂಗಲಾ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ ಪ್ರಕಾರ, ಅವರ ಆಸ್ತಿಯ ಮೌಲ್ಯ ಬರೋಬ್ಬರಿ ₹ 14.77 ಕೋಟಿ ಮತ್ತು ಸುರೇಶ್ ಅಂಗಡಿಯವರ ಹೆಸರಿನಲ್ಲಿರುವ ಆಸ್ತಿ ಮೌಲ್ಯ 15.94 ಕೋಟಿ ಆಗಿದೆ ತಿಳಿದು ಬಂದಿದೆ.

ಪತಿಯ ಆಸ್ತಿ ಮತ್ತು ಸಾಲಗಳು ವರ್ಗಾವಣೆಯ ಹಂತದಲ್ಲಿವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದ್ದು ಅವರಿಗೆ ₹ 7.55 ಕೋಟಿ ಸಾಲವಿದೆ ಎಂದು ಉಲ್ಲೇಖಿಸಲಾಗಿದೆ. ಸುರೇಶ್ ಅಂಗಡಿ ಶಿಕ್ಷಣ ಪ್ರತಿಷ್ಠಾನ, ಶ್ರೀ ವಿಜಯಲಕ್ಷ್ಮಿ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮಂಗಲಾ ಭಾಗಿಯಾಗಿರುವ ಅಂಗಡಿ ಶುಗರ್ಸ್ ಮತ್ತು ಪುನರ್ ಲಿಮಿಟೆಡ್‌ನ ಒಟ್ಟು ಆಸ್ತಿ ಮೌಲ್ಯ ₹ 106 ಕೋಟಿ ಆಗಿದೆ. ಈ ಸಂಸ್ಥೆಗಳ ಮೇಲೆ ₹ 91 ಕೋಟಿ ರೂಪಾಯಿ ಸಾಲವಿರುವ ಮಾಹಿತಿ ನೀಡಿದ್ದಾರೆ.

ಮಂಗಲಾ ಅವರು ವಾಣಿಜ್ಯ ಬಳಕೆ ವಾಹನಗಳು ಸೇರಿ ₹ 64 ಲಕ್ಷ ಮೌಲ್ಯದ 30 ವಾಹನಗಳನ್ನು ಹೊಂದಿದ್ದಾರೆ. 1,600 ಗ್ರಾಂ ತೂಕದ ಆಭರಣಗಳು ಅವರ ಬಳಿ ಇವೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ ತಿಳಿದು ಬಂದಿದೆ.

ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯ​ಮಂತ್ರಿ ಸ್ಥಾನಕ್ಕೆ ಏರಿಸಲು ನಾವುಗಳು ಪಟ್ಟ ಪಾಡು ದೇವ​ರಿಗೇ ಗೊತ್ತಿದೆ:ಮಾಜಿ ಸಚಿವ ​ಎನ್‌.ಚಲುವರಾಯಸ್ವಾಮಿ

error: Content is protected !!