ಬೆಳಗಾವಿ : ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಕ್ಕೆ..! - BC Suddi
ಬೆಳಗಾವಿ : ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಕ್ಕೆ..!

ಬೆಳಗಾವಿ : ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಕ್ಕೆ..!

ಬೆಳಗಾವಿ : ಸುರೇಶ್ ಅಂಗಡಿಯವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಗೆಲುವಿಗಾಗಿ ಕೈ ಕಮಲ ಪಾಳೆಯದಲ್ಲಿ ಕಸರತ್ತು ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿ ದಾಖಲೆಯನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದಾರೆ.

ಸತೀಶ ಜಾರಕಿಹೊಳಿ ನೀಡಿರುವ ದಾಖಲೆಯ ಪ್ರಕಾರ ಶತ ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ₹ 13.62 ಕೋಟಿ ಚರಾಸ್ತಿ ಹಾಗೂ ₹ 113 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸ್ವಯಾರ್ಜಿತ ಆಸ್ತಿಯ ಮೌಲ್ಯವೇ ₹ 121 ಕೋಟಿ ಇದ್ದು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ಅವರು ಕುಟುಂಬದ ಆಸ್ತಿ ವಿವರ ಘೋಷಿಸಿದ್ದಾರೆ.

ಪಿಯುಸಿ ವಿದ್ಯಾರ್ಹತೆ ಹೊಂದಿರುವ 58 ವರ್ಷದ ಸತೀಶ್ ಜಾರಕಿಹೊಳಿ ತಮ್ಮದು ಹಾಗೂ ಪತ್ನಿಯದ್ದು ಕೃಷಿ ಮತ್ತು ವ್ಯವಹಾರ ವೃತ್ತಿ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಯಾವುದೇ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಉಲ್ಲೇಖಿಸಿಲ್ಲ.

ನಗದು ₹ 5.04 ಲಕ್ಷ ಇದೆ. ಪತ್ನಿ ಶಕುಂತಲಾ ಬಳಿ ₹90,889, ಪುತ್ರಿ ಪ್ರಿಯಾಂಕಾ ಅವರಲ್ಲಿ ₹ 9,465 ಮತ್ತು ‍ಪುತ್ರ ರಾಹುಲ್‌ ಬಳಿ ₹18,350 ಇದೆ ಎಂದು ತಿಳಿಸಿದ್ದು ಬ್ಯಾಂಕ್ ಖಾತೆಗಳಲ್ಲಿ ₹31.74 ಲಕ್ಷ, ಪತ್ನಿ- ₹ 36.47 ಲಕ್ಷ, ಪುತ್ರಿ ₹ 1.55 ಲಕ್ಷ, ಪುತ್ರ ₹ 2.30 ಲಕ್ಷ ಇದೆ. ಸತೀಶ ಶುಗರ್ಸ್‌, ಘಟಪ್ರಭಾ ಶುಗರ್ಸ್‌, ವೆಸ್ಟರ್ನ್‌ ಘಾಟ್ ಇನ್ಫ್ರಾ, ಸುವರ್ಣ ಕರ್ನಾಟಕ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ ಮೊದಲಾದ ಕಡೆಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ಕುಟುಂಬದವರದ್ದೂ ಸಹ ಷೇರುಗಳಿವೆ.

ಪುತ್ರಿ ಪ್ರಿಯಾಂಕಾಗೆ ₹2.10 ಕೋಟಿ, ₹ 1.63 ಕೋಟಿ, ಯರಗಟ್ಟಿ ಶುಗರ್ಸ್‌ ₹ 38.60 ಲಕ್ಷ ಸಾಲ ನೀಡಿದ್ದಾರೆ. ಪತ್ನಿಯಿಂದ ₹ 98.63 ಲಕ್ಷ ಸಾಲ ಪಡೆದಿದ್ದಾರೆ. 2 ಮಹಿಂದ್ರಾ ಸ್ಕಾರ್ಪಿಯೊ ವಾಹನಗಳಿವೆ. 25 ತೊಲೆ ಬಂಗಾರ ಹಾಗೂ 4 ಕೆ.ಜಿ. 563 ಗ್ರಾಂ ಬೆಳ್ಳಿ ಹೊಂದಿದ್ದು ಪತ್ನಿ ಬಳಿ 2,949 ಗ್ರಾಂ. ಬಂಗಾರ 4.29 ಕೆ.ಜಿ. ಬೆಳ್ಳಿ, ಪುತ್ರಿ ಬಳಿ 100 ಗ್ರಾಂ. ಬಂಗಾರವಿದೆ. 6.75 ಕೋಟಿ ಸಾಲ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ ₹4.48 ಕೋಟಿ, ಪುತ್ರಿ ₹ 2.34 ಕೋಟಿ ಹಾಗೂ ಪುತ್ರನ ಹೆಸರಲ್ಲಿ ₹ 1.82 ಕೋಟಿ ಸಾಲವಿದೆ.

error: Content is protected !!