ಭಾರತದಲ್ಲಿ ಮಾಡಲಾಗುತ್ತಿರುವ ಕೊರೊನಾ ಪರೀಕ್ಷೆಗಳು ವಿಶ್ವಾಸಾರ್ಹವಲ್ಲ: ಆಸ್ಟ್ರೇಲಿಯಾ - BC Suddi
ಭಾರತದಲ್ಲಿ ಮಾಡಲಾಗುತ್ತಿರುವ ಕೊರೊನಾ ಪರೀಕ್ಷೆಗಳು ವಿಶ್ವಾಸಾರ್ಹವಲ್ಲ: ಆಸ್ಟ್ರೇಲಿಯಾ

ಭಾರತದಲ್ಲಿ ಮಾಡಲಾಗುತ್ತಿರುವ ಕೊರೊನಾ ಪರೀಕ್ಷೆಗಳು ವಿಶ್ವಾಸಾರ್ಹವಲ್ಲ: ಆಸ್ಟ್ರೇಲಿಯಾ

ಪರ್ತ್: ಭಾರತದಲ್ಲಿ ಮಾಡಲಾಗುತ್ತಿರುವ ಕೊರೊನಾ ಪರೀಕ್ಷೆಗಳು ವಿಶ್ವಾಸಾರ್ಹವಲ್ಲ ಎಂದು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ ಮುಖ್ಯಮಂತ್ರಿ ಮಾರ್ಕ್ ಮೆಕ್‍ಗೋವನ್ ಹೇಳಿದ್ದಾರೆ.

ಭಾರತದಿಂದ ಮರಳಿ ಪರ್ತ್ ಹೋಟೆಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿರುವ ನಾಲ್ವರಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ ಬಳಿಕ ಮಾರ್ಕ್ ಈ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ವೈಜ್ಞಾನಿಕವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿಲ್ಲ. ಹೀಗಾಗಿ ಭಾರತದಿಂದ ವಾಪಸ್ ಆಸ್ಟ್ರೇಲಿಯಾಗೆ ಬಂದ ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಭಾರತದಲ್ಲಿ ಅವರಿಗೆ ಸರಿಯಾಗಿ ಟೆಸ್ಟ್ ಮಾಡಿಲ್ಲ. ಅದು ಇಲ್ಲಿ ಸಮಸ್ಯೆ ಆಗುತ್ತಿದೆ ಎಂದು ಮಾರ್ಕ್ ಹೇಳಿದ್ದಾರೆ.

ಬೆಂಗಳೂರು: 4,000 ಕೋಟಿ ರೂ. ಐಎಂಎ ಹಗರಣ: ರೋಷನ್ ಬೇಗ್ ವಿರುದ್ಧ ಸಿಬಿಐನಿಂದ ದೋಷಾರೋಪ ಪಟ್ಟಿ ಸಲ್ಲಿಕೆ