ಲಾಕ್​ಡೌನ್ ಮಾಡುವ ಮೊದಲು ಜನರ ಬ್ಯಾಂಕ್ ಖಾತೆಗೆ 25 ಸಾವಿರ ರೂ. ಹಾಕಿ: ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ - BC Suddi
ಲಾಕ್​ಡೌನ್ ಮಾಡುವ ಮೊದಲು ಜನರ ಬ್ಯಾಂಕ್ ಖಾತೆಗೆ 25 ಸಾವಿರ ರೂ. ಹಾಕಿ: ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ

ಲಾಕ್​ಡೌನ್ ಮಾಡುವ ಮೊದಲು ಜನರ ಬ್ಯಾಂಕ್ ಖಾತೆಗೆ 25 ಸಾವಿರ ರೂ. ಹಾಕಿ: ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ

ಬೆಂಗಳೂರು: ಬೆಂಗಳೂರಿನಲ್ಲಿ ಲಾಕ್​ಡೌನ್ ಬೇಡವೇ ಬೇಡ. ಲಾಕ್​ಡೌನ್ ಮಾಡುವುದೇ ಆದರೆ ಜನರ ಅಕೌಂಟ್​ಗೆ ಮೊದಲು 25,000 ರೂ. ಹಾಕಿ ಎಂದು ಬೆಂಗಳೂರಿನ ಶಾಸಕರು, ಸಂಸದರು ಮತ್ತು ಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದ್ದಾರೆ. ಹೀಗಾಗಿ ಲಾಕ್​ಡೌನ್ ಬಗ್ಗೆ ನಾಳೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯ ಬಳಿಕ ಮಾಹಿತಿ ನೀಡಿರುವ ಸಿಎಂ ಯಡಿಯೂರಪ್ಪ ಅವರು, ಲಾಕ್​ಡೌನ್​ ಮಾಡಿದರೆ ಅದರ ಹೊಡೆತ ತಡೆದುಕೊಳ್ಳಲು ಜನರಿಗೆ ಆಗುವುದಿಲ್ಲ. ಅದರ ಬದಲು 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಕೊರೊನಾ ನಿಯಮಾವಳಿಗಳ ಅನುಸರಣೆಗೆ ಒತ್ತು ಕೊಡಿ ಎಂಬ ಒತ್ತಾಯ ಕೇಳಿಬಂದಿದೆ ಎಂದರು.

ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ನಮ್ಮ ಸಹಕಾರವಿದೆ. ನಾವು ಇಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ. ನೀವೂ ಇಲ್ಲಿ ರಾಜಕಾರಣ ಮಾಡಬೇಡಿ. ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದಲ್ಲಿ ಅದಕ್ಕೆ ಪೂರಕವಾಗಿ ವಿಪಕ್ಷಗಳು ಏನು ಮಾಡಬಹುದೆಂದು ಹೇಳಬಹುದು ಎಂದು ತಿಳಿಸಿದರು.

ಕೋವಿಡ್ ನಿಯಮ ಉಲ್ಲಂಘನೆ ಆರೋಪ : 35 ರೈತರ ಮೇಲೆ ಕೇಸ್