ಬೆಂಗಳೂರಲ್ಲಿ ಬೆಡ್, ಐಸಿಯು ಕೊರತೆ: ಸಚಿವ ಡಾ. ಸುಧಾಕರ್ - BC Suddi
ಬೆಂಗಳೂರಲ್ಲಿ ಬೆಡ್, ಐಸಿಯು ಕೊರತೆ: ಸಚಿವ ಡಾ. ಸುಧಾಕರ್

ಬೆಂಗಳೂರಲ್ಲಿ ಬೆಡ್, ಐಸಿಯು ಕೊರತೆ: ಸಚಿವ ಡಾ. ಸುಧಾಕರ್

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಬೆಡ್, ಐಸಿಯು ಕೊರತೆ ಉಂಟಾಗುತ್ತೆ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕಾಗುತ್ತೆ. ಸಿಎಂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸ್ತಾರೆ.

ಲಾಕ್ ಡೌನ್ ಬಗ್ಗೆ ಬಹಳ ಪ್ರಚಾರ ಆಗ್ತಿದೆ. ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಆದರೆ ಬಿಗಿಯಾದ ಕ್ರಮಗಳು ಆಗಬೇಕು, ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.ಸರ್ವಪಕ್ಷ ಸಭೆಗಳ ನಾಯಕರ ಜೊತೆಯೂ ಚರ್ಚೆ ಮಾಡುತ್ತಾರೆ. ನಾಳೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸ್ತಾರೆ. ಇಂದೇ ಬೆಂಗಳೂರಿಗೆ ಸಂಬಂಧಪಟ್ಟಂತೆ ರೂಲ್ಸ್ ಆಗಬಹುದು. ಇಲ್ಲ ನಾಳೆ ಸರ್ವಪಕ್ಷ ನಾಯಕರ ಜೊತೆ ಚರ್ಚೆ ಮಾಡಿ ನಾಳೆಯೇ ರೂಲ್ಸ್ ಬರಬಹುದು ಎಮದು ಸಚಿವರು ತಿಳಿಸಿದರು.