ಬೆಡ್ ಬುಕ್ಕಿಂಗ್ ದಂಧೆ, ಮಾಫಿಯಾ ಬಯಲಿಗೆಳೆದ ತೇಜಸ್ವಿ ಸೂರ್ಯ - BC Suddi
ಬೆಡ್ ಬುಕ್ಕಿಂಗ್ ದಂಧೆ, ಮಾಫಿಯಾ ಬಯಲಿಗೆಳೆದ ತೇಜಸ್ವಿ ಸೂರ್ಯ

ಬೆಡ್ ಬುಕ್ಕಿಂಗ್ ದಂಧೆ, ಮಾಫಿಯಾ ಬಯಲಿಗೆಳೆದ ತೇಜಸ್ವಿ ಸೂರ್ಯ

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಬೆಡ್‌ ಸಿಗದೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ಜನರ ಜೀವದ ಜೊತೆ ಆಟಾಡುತ್ತಿರುವ, ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ಬೆಡ್ ಬುಕ್ಕಿಂಗ್ ವೆಬ್ ಸೈಟ್‌ಗಳಲ್ಲಿ ಬೆಡ್‌ಗಳು ಭರ್ತಿಯಾಗಿರುವುದು ತೋರಿಸುತ್ತಿದೆ. ಆದರೆ ಬೆಡ್ ಅಗತ್ಯವಿಲ್ಲದೇ ಇರುವ ಮನೆಯಲ್ಲಿಯೇ ಐಸೋಲೇಷನ್ ಆಗಿರುವವರ, ಮೃತಪಟ್ಟವರ, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವವರ ಹೆಸರಿನಲ್ಲಿ ಹಣ ಪಡೆದು ತಮಗೆ ಬೇಕಾಗಿರುವವರಿಗೆ ಅಕ್ರಮವಾಗಿ ಬೆಡ್ ಬುಕ್ ಮಾಡುತ್ತಿರುವ ಮಾಫಿಯಾ ನಡೆದಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

“ಕೆಲವು ಬಿಬಿಎಂಪಿ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ಮನಸೋ ಇಚ್ಛೆ ಬೆಡ್ ಬುಕ್ ಮಾಡುವುದಕ್ಕೆ ಅದೇನು ಬಿಬಿಎಂಪಿ ಅಧಿಕಾರಿಗಳ ಜಹಗೀರ? ಕೋವಿಡ್-19 ವಾರ್ ರೂಮ್‌ಗೆ ಹೋಗಿ ಸಮಸ್ಯೆಗಳಿದ್ದರೆ ಬಗೆಹರಿಸಲು ಸಹಕರಿಸಲು ಯತ್ನಿಸಿದರೂ ಜನಪ್ರತಿನಿಧಿಗಳಿಗೆ ವಾರ್ ರೂಮ್ ಗಳಿಗೆ ಹೋಗಲು ಬಿಡುತ್ತಿರಲಿಲ್ಲ” ಶಾಸಕ ಸತೀಶ್ ರೆಡ್ಡಿ ಅವರು ಜನರನ್ನು ಕರೆದೊಯ್ದು ಪ್ರತಿಭಟನೆ ನಡೆಸಿದರೂ ಸಹ ವಾರ್ ರೂಮ್ ಒಳಗೆ ಹೋಗಿ ತಪಾಸಣೆ ನಡೆಸುವುದಕ್ಕೆ ಬಿಡದಂತಹ ವಾತಾವರಣ ಇದೆ” ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.