ಕೊರೊನಾ ಕಾರಣದಿಂದಾಗಿ ಅನಿವಾರ್ಯವಾಗಿ ಮನೆಗೆ ವಾಪಾಸ್‌ ತೆರಳುತ್ತಿರುವ ವಲಸೆ ಕಾರ್ಮಿಕರ ಖಾತೆಗಳಿಗೆ ಸರ್ಕಾರ ಹಣ ವರ್ಗಾಯಿಸಬೇಕು: ರಾಹುಲ್‌ ಗಾಂಧಿ - BC Suddi
ಕೊರೊನಾ ಕಾರಣದಿಂದಾಗಿ ಅನಿವಾರ್ಯವಾಗಿ ಮನೆಗೆ ವಾಪಾಸ್‌ ತೆರಳುತ್ತಿರುವ ವಲಸೆ ಕಾರ್ಮಿಕರ ಖಾತೆಗಳಿಗೆ ಸರ್ಕಾರ ಹಣ ವರ್ಗಾಯಿಸಬೇಕು: ರಾಹುಲ್‌ ಗಾಂಧಿ

ಕೊರೊನಾ ಕಾರಣದಿಂದಾಗಿ ಅನಿವಾರ್ಯವಾಗಿ ಮನೆಗೆ ವಾಪಾಸ್‌ ತೆರಳುತ್ತಿರುವ ವಲಸೆ ಕಾರ್ಮಿಕರ ಖಾತೆಗಳಿಗೆ ಸರ್ಕಾರ ಹಣ ವರ್ಗಾಯಿಸಬೇಕು: ರಾಹುಲ್‌ ಗಾಂಧಿ

ನವದೆಹಲಿ: ”ಕೊರೊನಾ ಕಾರಣದಿಂದಾಗಿ ಅನಿವಾರ್ಯವಾಗಿ ಮನೆಗೆ ವಾಪಾಸ್‌ ತೆರಳುತ್ತಿರುವ ವಲಸೆ ಕಾರ್ಮಿಕರ ಖಾತೆಗಳಿಗೆ ಸರ್ಕಾರ ಹಣ ವರ್ಗಾಯಿಸಬೇಕು. ಇದು ಕೇಂದ್ರ ಸರ್ಕಾರದ ಜವಾಬ್ದಾರಿ” ಎಂದು ಕಾಂಗ್ರೆಸ್‌ ಮುಖಂಡ, ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ”ವಲಸಿಗರು ಮತ್ತೊಮ್ಮೆ ವಲಸೆ ಹೋಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಕೊರೊನಾ ಹರಡಲು ಈ ಜನರೇ ಕಾರಣ ಎಂದು ಹೇಳುತ್ತಿರುವ ಸರ್ಕಾರ ಸಾರ್ವಜನಿಕರ ನೆರವಿಗೆ ಬರುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಿದ ಬಗ್ಗೆ ಕಾಂಗ್ರೆಸ್‌ ಪ್ರಶ್ನಿಸಿದೆ. “ಕೊರೊನಾ ತೆರಿಗೆ ಮತ್ತು ಪಿಎಂ-ಕೇರ್ಸ್ ನಿಧಿಯ ಹಣ ಎಲ್ಲಿದೆ?” ಎಂದು ಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸಿಂಗ್‌ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

ದೆಹಲಿ ಸರ್ಕಾರವು ಸೋಮವಾರದಿಂದ ರಾತ್ರಿ 10 ಗಂಟೆಗೆ ಒಂದು ವಾರದವರೆಗೆ ಲಾಕ್ ಡೌನ್ ಘೋಷಿಸಿದ ನಂತರ ಸಾವಿರಾರು ವಲಸಿಗರು ತಮ್ಮ ಊರಿಗೆ ತೆರಳಲು ಬಸ್ ನಿಲ್ದಾಣಗಳಿಗೆ ಧಾವಿಸಿದ್ದಾರೆ. ಲಾಕ್‌ಡೌನ್‌ ಹೇರಿದ ಬಳಿಕ ಊರಿಗೆ ತೆರಳಲು ಸಾವಿರಾರು ಕಿಲೋ ಮೀಟರ್‌ ನಡೆಯಬೇಕಾದೀತು ಎಂಬ ಕಳೆದ ವರ್ಷದ ಪರಿಸ್ಥಿತಿಯನ್ನು ನೆನಪಿಸಿಕೊಂಡ ಈ ಕಾರ್ಮಿಕರು ತಮ್ಮ ಊರಿಗೆ ತೆರಳುವ ಧಾವಂತದಲ್ಲಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಪಾಲರು ನೇರವಾಗಿ ಬಂದಿರುವುದು ಆಶ್ಚರ್ಯವಾಗಿದೆ: ಈಶ್ವರಪ್ಪ