ಬಸವರಾಜ್‌ ಬೊಮ್ಮಾಯಿ ಅವರೇ, ಮಂತ್ರಿಗಳಿಗೇ ಬೇರೆ, ಸಾಮಾನ್ಯರಿಗೇ ಬೇರೆ ಕಾನೂನು ಇದೆಯೇ?: ಕಾಂಗ್ರೆಸ್‌ - BC Suddi
ಬಸವರಾಜ್‌ ಬೊಮ್ಮಾಯಿ ಅವರೇ, ಮಂತ್ರಿಗಳಿಗೇ ಬೇರೆ, ಸಾಮಾನ್ಯರಿಗೇ ಬೇರೆ ಕಾನೂನು ಇದೆಯೇ?: ಕಾಂಗ್ರೆಸ್‌

ಬಸವರಾಜ್‌ ಬೊಮ್ಮಾಯಿ ಅವರೇ, ಮಂತ್ರಿಗಳಿಗೇ ಬೇರೆ, ಸಾಮಾನ್ಯರಿಗೇ ಬೇರೆ ಕಾನೂನು ಇದೆಯೇ?: ಕಾಂಗ್ರೆಸ್‌

ಬೆಂಗಳೂರ : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಟ್ವೀಟ್‌ ವಾರ್‌ ಮುಂದುವರೆದಿದೆ.

ಸಿಡಿ ಪ್ರಕರಣ ವಿಚಾರದ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆ‌‌ಸ್‌, “ಬಸವರಾಜ್‌ ಬೊಮ್ಮಾಯಿ ಅವರೇ, ಮಂತ್ರಿಗಳಿಗೇ ಬೇರೆ, ಸಾಮಾನ್ಯರಿಗೇ ಬೇರೆ ಕಾನೂನು ಇದೆಯೇ? ಎಂದು ರಾಜ್ಯದ ಜನ ಕೇಳುತ್ತಿದ್ದಾರೆ. ಜನತೆಯಲ್ಲಿದ್ದ ಕಾನೂನಿನ ಬಗೆಗಿನ ಭರವಸೆಯನ್ನು ಕುಗ್ಗಿಸುತ್ತಿರುವುದೂ ಅಲ್ಲದೆ ಅತ್ಯಾಚಾರ ಆರೋಪಿಯ ಬಗ್ಗೆ ಬಂಡತನದಲ್ಲಿ ಸಮರ್ಥನೆಗೆ ಇಳಿಯುವುದಕ್ಕೆ ಸ್ವಲ್ಪವೂ ನಾಚಿಕೆ ಎನಿಸುತ್ತಿಲ್ಲವೇ?” ಎಂದು ಪ್ರಶ್ನಿಸಿದೆ.

“ಬಿ.ಎಸ್‌.ಯಡಿಯೂರಪ್ಪ ಅವರೇ, ಹಾಗಿದ್ದರೆ ಕಣ್ಣಿನಲ್ಲಿ ನೋಡಲಾಗದಂತಹ ಸಿಡಿ ಇದೆ ಎಂದು ನಿಮ್ಮ ಬಗೆಗಿನ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪ ನಿಜವೇ? ಅಥವಾ ಸುಳ್ಳೇ? ನಿಜವಾಗಿದ್ದರೆ ನೀವೇಕೆ ಇನ್ನೂ ರಾಜೀನಾಮೆ ನೀಡಲಿಲ್ಲ?. ಸುಳ್ಳಾಗಿದ್ದರೆ ನೀವೇಕೆ ಇನ್ನೂ ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟಿಸಲಿಲ್ಲ?” ಎಂದು ಕೇಳಿದೆ.

error: Content is protected !!