ಹಾವೇರಿ: ಮಾಸ್ಕ್ ಧರಿಸದ್ದಕ್ಕೆ ಬನಿಯನ್ನೇ ಮಾಸ್ಕ್ ಮಾಡಿಸಿದ ಪೊಲೀಸರು - BC Suddi
ಹಾವೇರಿ: ಮಾಸ್ಕ್ ಧರಿಸದ್ದಕ್ಕೆ ಬನಿಯನ್ನೇ ಮಾಸ್ಕ್ ಮಾಡಿಸಿದ ಪೊಲೀಸರು

ಹಾವೇರಿ: ಮಾಸ್ಕ್ ಧರಿಸದ್ದಕ್ಕೆ ಬನಿಯನ್ನೇ ಮಾಸ್ಕ್ ಮಾಡಿಸಿದ ಪೊಲೀಸರು

ಹಾವೇರಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳುತ್ತಿದ್ದರು ಕೆಲವರು ಮಾತ್ರ ಮಾಸ್ಕ್ ಧರಿಸುವುದು ಸೇರಿದಂತೆ ಕೊರೊನಾ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಮಾಸ್ಕ್ ಧರಿಸದವನಿಗೆ ಪೊಲೀಸರು ಬನಿಯನ್ನೇ ಮಾಸ್ಕ್ ಮಾಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾಸ್ಕ್ ಧರಿಸದೆ ಹೋಗುತ್ತಿದ್ದ ವ್ಯಕ್ತಿಗೆ ಶರ್ಟ್ ಬಿಚ್ಚಿಸಿ ಆತ ಧರಿಸಿದ್ದ ಬನಿಯನ್ನು ಮಾಸ್ಕ್ ನಂತೆ ಕಟ್ಟಿಕೊಂಡು ಹೋಗುವಂತೆ ಪೊಲೀಸರು ಸೂಚಿಸಿದ್ದು, ಆತ ಬನಿಯನ್ನೇ ಮಾಸ್ಕ್ ನಂತೆ ಧರಿಸಿ ತೆರಳಿದ್ದಾನೆ. ಇನ್ನು ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಹೀಗಾಗಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದ ರಾಜಸ್ಥಾನ ಸಿಎಂ ಅಶೋಕ್‌‌ ಗೆಹ್ಲೋಟ್‌‌