ಕೋವಿಡ್‌ ಪ್ರಕರಣ: ಬೆಂಗಳೂರು ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಸುಧಾಕರ್‌ - BC Suddi
ಕೋವಿಡ್‌ ಪ್ರಕರಣ:  ಬೆಂಗಳೂರು ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಸುಧಾಕರ್‌

ಕೋವಿಡ್‌ ಪ್ರಕರಣ: ಬೆಂಗಳೂರು ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಸುಧಾಕರ್‌

ಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಉಲ್ಬಣವಾಗುತ್ತಿದ್ದು, ಬೆಂಗಳೂರು ಲಾಕ್‌ಡೌನ್‌ ಅನಿವಾರ್ಯ ಎಂಬ ಸುಳಿವನ್ನು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ನೀಡಿದ್ದಾರೆ.

ʻಮಣಿಪಾಲ್‌ ಆಸ್ಪತ್ರೆಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಚಾರಿಸುವೆ. ಜೊತೆಗೆ, ಬೆಂಗಳೂರಿನಲ್ಲಿ ಕೋವಿಡ್‌ ತೀವ್ರಗೊಳ್ಳುತ್ತಿರುವ ಬಗ್ಗೆಯೂ ಸಿಎಂ ಜೊತೆ ಚರ್ಚಿಸುವೆ. ಕೋವಿಡ್‌ ಸ್ಥಿತಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಕ್ರಮ ಅನಿವಾರ್ಯ ಎಂದು ಲಾಕ್‌ಡೌನ್‌ ಬಗ್ಗೆ ಸಚಿವ ಸುಧಾಕರ್‌ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೆಲ ಸಮಸ್ಯೆಗಳು ಎದುರಾಗುತ್ತಿವೆ. ನಮ್ಮ ಐಸಿಯುಗಳ ಸಾಮರ್ಥ್ಯವನ್ನೂ ಮೀರಿ ಹೋಗುತ್ತಿರುವುದರಿಂದ ಸಮಸ್ಯೆ ಆಗಿರುವುದು ನಿಜ. ಹೀಗಾಗಿ, ಬೆಂಗಳೂರಿನಲ್ಲಿ ಬಿಗಿ ಕ್ರಮಗಳು ಅನಿವಾರ್ಯ. ಈ ಬಗ್ಗೆ ಸಿಎಂ ಭೇಟಿ ವೇಳೆ ಚರ್ಚೆ ನಡೆಸುವೆ ಎಂದು ತಿಳಿಸಿದ್ದಾರೆ.

ತಜ್ಞರ ಸಮಿತಿ ಕೊಟ್ಟಿರುವ ವರದಿ ಹಾಗೂ ಕೆಲ ಪ್ರಮುಖ ಸಲಹೆಗಳ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುವುದು. ನಿನ್ನೆ ನಡೆದ ಸಭೆ ಹಾಗೂ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸಮಾಲೋಚಿಸಲಾಗುವುದು. ಬೆಂಗಳೂರಿನಲ್ಲಿ ಇನ್ನೂ ಅತ್ಯಂತ ಬಿಗಿ ಕ್ರಮಗಳು ಅನಿವಾರ್ಯ ಎನ್ನುವುದು ನನ್ನ ಅಭಿಪ್ರಾಯ. ಈ ವಿಚಾರಗಳನ್ನು ಸಿಎಂಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಆಮ್ಲಜನಕ ಅಭಾವ ಕುರಿತು ಮಾತನಾಡಿದ ಸಚಿವರು, ರಾಜ್ಯದಲ್ಲಿ ಆಮ್ಲಜನಕ ಅಭಾವ ಇದೆ ಎನ್ನುವುದು ಸರಿಯಲ್ಲ. ಖಾಸಗಿ ನರ್ಸಿಂಗ್ ಹೋಂನವರು ಆಮ್ಲಜನಕ ಸರಬರಾಜು ಮಾಡುವವರಿಗೆ ಕೊಡಬೇಕಾದ ಬಾಕಿ ಪಾವತಿ ಮಾಡದೇ ಇರುವುದರಿಂದ ಅವರಿಗೆ ಅಕ್ಸಿಜನ್ ಕೊರತೆ ಆಗಿದೆ. ಅದೂ ಕೂಡ ಒಂದೋ‌ ಎರಡೋ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಗಳೂರು: ಪೊಲೀಸ್ ಕಮಿಷನರೇಟ್ 35 ಮಹಿಳಾ ಸಿಬ್ಬಂದಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ