ಬೆಂಗಳೂರು: ಆಕ್ಸಿಜನ್ ಇಲ್ಲದೇ ಯಾರೇ ಸತ್ತರೂ ಅದು ಕೊಲೆ: ಕಾಂಗ್ರೆಸ್ ಟ್ವೀಟ್ - BC Suddi
ಬೆಂಗಳೂರು: ಆಕ್ಸಿಜನ್ ಇಲ್ಲದೇ ಯಾರೇ ಸತ್ತರೂ ಅದು ಕೊಲೆ: ಕಾಂಗ್ರೆಸ್ ಟ್ವೀಟ್

ಬೆಂಗಳೂರು: ಆಕ್ಸಿಜನ್ ಇಲ್ಲದೇ ಯಾರೇ ಸತ್ತರೂ ಅದು ಕೊಲೆ: ಕಾಂಗ್ರೆಸ್ ಟ್ವೀಟ್

ಬೆಂಗಳೂರು: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಜನ ಮೃತಪಟ್ಟ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರದ ಮೇಲೆ ಸರಣಿ ಟ್ವೀಟ್ ಸಮರ ಶುರು ಹಚ್ಚಿಕೊಂಡಿದೆ.ನಿಮ್ಮ ಸರ್ಕಾರ ಎಚ್ಚರಗೊಳ್ಳಲು ಇನ್ನೆಷ್ಟು ಬಲಿ ಬೇಕು? ಸುಧಾಕರ್ ಅವರೇ ನೀವು ರಾಜೀನಾಮೆ ನೀಡಲು ಇನ್ನೂ ಎಷ್ಟು ಪ್ರಾಣಗಳು ಹೋಗಬೇಕು?.

ಆಪರೇಷನ್ ಕಮಲಕ್ಕೆ ತೋರಿದ ಆಸಕ್ತಿ ಸೋಂಕಿತರ ಚಿಕಿತ್ಸೆಗೆ ತೋರಿಲ್ಲವೇಕೆ? ಶಾಸಕರಿಗೆ ವಿಮಾನ ಹತ್ತಿಸಿದಂತೆ ಸೋಂಕಿತರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲವೇಕೆ? ಬಾಂಬೆ ಹೋಟೆಲ್ ನಲ್ಲಿ ಬೆಡ್ ವ್ಯವಸ್ಥೆ ಮಾಡಿದವರು ಸೋಂಕಿತರಿಗೆ ಬೆಡ್ ಕೊಡಲಿಲ್ಲವೇಕೆ? ಶಾಸಕರಿಗೆ ಭಕ್ಷ್ಯ ಭೋಜನ ಕೊಟ್ಟವರು ಆಕ್ಸಿಜನ್ ಕೊಡಲಿಲ್ಲವೇಕೆ? ಹೀಗೆ ಅನೇಕ ಪ್ರಶ್ನೆಗಳ ಸುರಿಮಳೆಗೈದ ಕಾಂಗ್ರೆಸ್, ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

ಇನ್ನು ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಕಾರ್ಯದರ್ಶಿ ರೇಖಾ ಶ್ರೀನಿವಾಸ್, ‘ಆಕ್ಸಿಜನ್ ಇಲ್ಲದೇ ಯಾರೇ ಸತ್ತರೂ ಅದು ಕೊಲೆ, ಅದಕ್ಕೆ ಕೇಂದ್ರ ರಾಜ್ಯ ಸರ್ಕಾರಗಳೇ ನೇರ ಹೊಣೆ’ ಎಂದು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕದನ ವಿರಾಮ ಉಲ್ಲಂಘಿಸಿ ಬಿಎಸ್‌ಎಫ್‌‌ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್‌‌