ವಿಧಾನಸಭೆ ಚುನಾವಣೆ: ಅಸ್ಸಾಂನಲ್ಲಿ ಮತ್ತೆ ಗದ್ದುಗೆ ಏರಲು ತಯಾರಾದ ಬಿಜೆಪಿ ಒಕ್ಕೂಟದ ಎನ್‌‌ಡಿಎ - BC Suddi
ವಿಧಾನಸಭೆ ಚುನಾವಣೆ: ಅಸ್ಸಾಂನಲ್ಲಿ ಮತ್ತೆ ಗದ್ದುಗೆ ಏರಲು ತಯಾರಾದ ಬಿಜೆಪಿ ಒಕ್ಕೂಟದ ಎನ್‌‌ಡಿಎ

ವಿಧಾನಸಭೆ ಚುನಾವಣೆ: ಅಸ್ಸಾಂನಲ್ಲಿ ಮತ್ತೆ ಗದ್ದುಗೆ ಏರಲು ತಯಾರಾದ ಬಿಜೆಪಿ ಒಕ್ಕೂಟದ ಎನ್‌‌ಡಿಎ

ಅಸ್ಸಾಂ: ಪಂಚ ರಾಜ್ಯಗಳ ಚುನಾವಣೆಯ ಪೈಕಿ ಅಸ್ಸಾಂ ಹಲವು ಕಾರಣಗಳಿಂದ ಕುತೂಹಲ ಕೆರಳಿಸಿತ್ತು. ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆಯಾ ಎನ್ನುವ ಪ್ರಶ್ನೆ ಮೂಡಿತ್ತು. ಇದೀಗ ಚುನಾವಣಾ ಫಲಿತಾಂಶ ಎಲ್ಲಾ ಕುತೂಹಲಗಳಿಗೆ ಉತ್ತರ ನೀಡಿದೆ. ಬಿಜೆಪಿ ಒಕ್ಕೂಟದ ಎನ್‌‌ಡಿಎ ಅಸ್ಸಾಂನಲ್ಲಿ ಮತ್ತೆ ಗದ್ದುಗೆ ಏರಲು ತಯಾರಾಗಿದೆ.

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 78 ಸ್ಥಾನಗಳನ್ನು ಪಡೆದುಕೊಂಡು ಭರ್ಜರಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌‌‌ ನೇತೃತ್ವದ ಮಹಜೋತ್‌‌‌ ಕೂಟ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ರೀತಿ ಮುನ್ನಡೆ ಸಾಧಿಸಿದರೆ ಈ ಬಾರಿ ಎನ್‌ಡಿಎ 90 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್‌ 35 ಸ್ಥಾನ ಪಡೆದುಕೊಳ್ಳಲಿದೆ ಎನ್ನುವ ಲೆಕ್ಕಾಚಾರ ಹೊರಬಂದಿದೆ.

2016ರ ವಿಧನಸಭಾ ಚುನಾವಣೆಯಲ್ಲಿ 86 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಸ್ಸಾಂನಲ್ಲಿ ಅಧಿಕಾರಕ್ಕೇರಿತ್ತು. ಮುಖ್ಯಮಂತ್ರಿಯಾಗಿ ಸರ್ಬಾನಂದ ಸೊನೋವಾಲ್‌‌ ಅವರು ಪದಗ್ರಹಣ ಮಾಡಿದ್ದರು.

“ನಮಗೆ ಜನರು ಆಶೀರ್ವಾದ ಮಾಡಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತದೆ ಎಂದು ನಾವು ಖಚಿತವಾಗಿ ಹೇಳಬಹುದು. ನಾವು ಎಜಿಪಿ ಹಾಗೂ ಯುಪಿಪಿಎಲ್‌ನೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ” ಎಂದು ಸೋನೋವಾಲ್‌‌ ತಿಳಿಸಿದ್ದಾರೆ.

ಬೆಳಗಾವಿ: ಹಿಂದೆ ಸರಿದು ಮತ್ತೆ ಮುನ್ನಡೆ ಸಾಧಿಸಿದ ಸತೀಶ್ ಜಾರಕಿಹೊಳಿ