ಪುಟ್ಟ ಕಂದಮ್ಮನ ಕೈಗೆ ನಕಲಿ ಉಗುರುಗಳನ್ನ ಅಂಟಿಸಿರುವ ಫೋಟೋವೊಂದು ಸಾಕಷ್ಟು ವಿವಾದವನ್ನ ಸೃಷ್ಟಿಸಿದೆ..! - BC Suddi
ಪುಟ್ಟ ಕಂದಮ್ಮನ ಕೈಗೆ ನಕಲಿ ಉಗುರುಗಳನ್ನ ಅಂಟಿಸಿರುವ ಫೋಟೋವೊಂದು ಸಾಕಷ್ಟು ವಿವಾದವನ್ನ ಸೃಷ್ಟಿಸಿದೆ..!

ಪುಟ್ಟ ಕಂದಮ್ಮನ ಕೈಗೆ ನಕಲಿ ಉಗುರುಗಳನ್ನ ಅಂಟಿಸಿರುವ ಫೋಟೋವೊಂದು ಸಾಕಷ್ಟು ವಿವಾದವನ್ನ ಸೃಷ್ಟಿಸಿದೆ..!

 ಸೋಶಿಯಲ್​ ಮೀಡಿಯಾದಲ್ಲಿ ಪುಟ್ಟ ಕಂದಮ್ಮನ ಕೈಗೆ ನಕಲಿ ಉಗುರುಗಳನ್ನ ಅಂಟಿಸಿರುವ ಫೋಟೋವೊಂದು ಸಾಕಷ್ಟು ವಿವಾದವನ್ನ ಸೃಷ್ಟಿಸಿದೆ. ಪುಟ್ಟ ಕಂದಮ್ಮಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಕಡಿಮೆಯೇ. ಅವುಗಳ ಚರ್ಮ ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಅವುಗಳ ಉಗುರುಗಳನ್ನ ಕಾಲ ಕಾಲಕ್ಕೆ ಕತ್ತರಿಸಬೇಕು. 

ಆದರೆ ಈ ಫೋಟೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗಿದ್ದು ಮಗುವಿಗೆ ಮಾಡಲಾದ ಈ ಮೆನಿಕ್ಯೂರ್​ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ತುಂಬಾನೆ ಅಪಾಯಕಾರಿ. ಮಗು ಪದೇ ಪದೇ ತನ್ನ ಕಣ್ಣು , ಮೂಗು ಬಾಯಿಗಳನ್ನ ಮುಟ್ಟಿಕೊಳ್ತಾನೇ ಇರುತ್ತೆ. ಹೀಗಾಗಿ ಇಂತಹ ಕೆಲಸ ಮಾಡಬಾರದು ಅಂತಾ ಕಮೆಂಟ್​ ಮಾಡಲಾಗಿದೆ.ಫೇಸ್​ಬುಕ್​ನಲ್ಲಿ ಶೇರ್​ ಮಾಡಲಾದ ಫೋಟೋದಲ್ಲಿ ನಕಲಿ ಉಗುರುಗಳಿಂದ ಮಗುವಿನ ಕೈಯನ್ನ ಅಲಂಕರಿಸಲಾಗಿದ್ದು, ಈ ಕೈಯನ್ನ ಮಹಿಳೆ ಹಿಡಿದುಕೊಂಡಿದ್ದಾಳೆ. ಈ ಫೋಟೋಗೆ ನಾನು ಮಕ್ಕಳ ಉಗುರನ್ನೂ ಕಡಿಮೆ ದರದಲ್ಲಿ ಅಲಂಕರಿಸಬಲ್ಲೆ ಎಂದು ಶೀರ್ಷಿಕೆ ನೀಡಲಾಗಿದೆ.

 

error: Content is protected !!