ಅಯೋಧ್ಯೆಗೆ ಉಚಿತ ಪ್ರವಾಸದ ಆಮಿಷವೊಡ್ಡಿದ್ದ ಅಭ್ಯರ್ಥಿಗೆ ನೋಟೀಸ್ - BC Suddi
ಅಯೋಧ್ಯೆಗೆ ಉಚಿತ ಪ್ರವಾಸದ ಆಮಿಷವೊಡ್ಡಿದ್ದ ಅಭ್ಯರ್ಥಿಗೆ ನೋಟೀಸ್

ಅಯೋಧ್ಯೆಗೆ ಉಚಿತ ಪ್ರವಾಸದ ಆಮಿಷವೊಡ್ಡಿದ್ದ ಅಭ್ಯರ್ಥಿಗೆ ನೋಟೀಸ್

ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮತದಾರರನ್ನು ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ ಉಚಿತವಾಗಿ ಕರೆದುಕೊಂಡು ಹೋಗುವುದಾಗಿ ಆಮಿಷವೊಡ್ಡಿದ್ದ ಬಿಜೆಪಿ ಅಭ್ಯರ್ಥಿ ಜೀತೇಂದ್ರ ತಿವಾರಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಮಾ. 21 ರಂದು ಹರಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ರೀತಿಯಲ್ಲಿ ಹೇಳಿಕೆ ನೀಡಿದ್ದ ತಿವಾರಿ, ನಂತರ ಪಕ್ಷದ ಸಭೆಯೊಂದರಲ್ಲಿಯೂ ಇದೇ ರೀತಿ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾ. 22 ರಂದು ತೃಣ ಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇಂತಹ ಹೇಳಿಕೆ ನೀಡುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಅರಿವಿರಲಿಲ್ಲ ಎಂಬುದಾಗಿ ತಿವಾರಿ ಚುನಾವಣಾ ಆಯೋಗಕ್ಕೆ ನೀಡಿರುವ ನೋಟಿಸ್ ಗೆ ಪ್ರತಿಕ್ರಿಯಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

error: Content is protected !!