ಮಾಸ್ಕ್ ಹಾಕೊಳಮ್ಮ ಅಂದಿದ್ದಕ್ಕೆ "ಗಂಡನಿಗೆ ನಿಮ್ಮೆದುರೇ ಕಿಸ್ ಮಾಡ್ತೀನಿ ಏನ್ಮಾಡ್ತೀರೋ ಮಾಡ್ಕೊಳಿ" ಎಂದು ಪೊಲೀಸರಿಗೆ ಅವಾಜ್ - BC Suddi
ಮಾಸ್ಕ್ ಹಾಕೊಳಮ್ಮ ಅಂದಿದ್ದಕ್ಕೆ “ಗಂಡನಿಗೆ ನಿಮ್ಮೆದುರೇ ಕಿಸ್ ಮಾಡ್ತೀನಿ ಏನ್ಮಾಡ್ತೀರೋ ಮಾಡ್ಕೊಳಿ” ಎಂದು ಪೊಲೀಸರಿಗೆ ಅವಾಜ್

ಮಾಸ್ಕ್ ಹಾಕೊಳಮ್ಮ ಅಂದಿದ್ದಕ್ಕೆ “ಗಂಡನಿಗೆ ನಿಮ್ಮೆದುರೇ ಕಿಸ್ ಮಾಡ್ತೀನಿ ಏನ್ಮಾಡ್ತೀರೋ ಮಾಡ್ಕೊಳಿ” ಎಂದು ಪೊಲೀಸರಿಗೆ ಅವಾಜ್

ನವದೆಹಲಿ: ಮಾಸ್ಕ್ ಹಾಕೊಳಮ್ಮ ಅಂದಿದ್ದಕ್ಕೆ ಘಟವಾಣಿ ಆಂಟಿಯೊಬ್ಬಳು ತಿರುಗಿ ಪೊಲೀಸರಿಗೇ ಅವಾಜ್ ಹಾಕಿದ್ದಾಳೆ. ಈ ಘಟನೆ ದೆಹಲಿಯ ದರಿಯಾಗಂಜ್ ನಲ್ಲಿ ನಡೆದಿದೆ‌.

ಕಾರಿನ ಒಳಗೆ ಮಾಸ್ಕ್ ಹಾಕಿಲ್ಲ ಎಂದು ದಂಪತಿಯನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಕುಪಿತಗೊಂಡ ಆಕೆ ನಾನು ಇಲ್ಲೇ ನಿಮ್ಮೆದುರಲ್ಲೇ ನನ್ನ ಗಂಡನಿಗೆ ಕಿಸ್ ಮಾಡ್ತೀನಿ. ಅದನ್ನ ನೀವು ತಡಿತೀರಾ? ನನ್ನ ಕಾರ್ ಯಾಕೆ ನಿಲ್ಲಿಸಿದ್ರಿ? ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾಳೆ.

ಇಷ್ಟೆಲ್ಲ ಆದರೂ ಪೊಲೀಸರು ಸಹನೆಯಿಂದಲೇ ಆಕೆಗೆ ಕನ್ವಿನ್ಸ್ ಮಾಡಿದ್ದಾರೆ. ಕೊನೆಗೆ ಮಾತಿಗೆ ಬಗ್ಗದ ಆಕೆಯನ್ನ ಗಂಡನ ಸಮೇತ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಇಷ್ಟೆಲ್ಲ ನಡೆಯುವಾಗ ಆಕೆಯ ಗಂಡ ಪಕ್ಕದಲ್ಲಿ ಸುಮ್ಮನೇ ನಿಂತು ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದ.

ಬೆಂಗಳೂರಲ್ಲಿ ಬೆಡ್, ಐಸಿಯು ಕೊರತೆ: ಸಚಿವ ಡಾ. ಸುಧಾಕರ್