ಕೊರೊನಾ 2ನೇ ಅಲೆ ಶವಪರೀಕ್ಷೆ: ಮೊದಲನೇ ಅಲೆಗಿಂತ ಬಯಲಾಯ್ತು ಭಯಾನಕ ಸಂಗತಿ - BC Suddi
ಕೊರೊನಾ 2ನೇ ಅಲೆ ಶವಪರೀಕ್ಷೆ: ಮೊದಲನೇ ಅಲೆಗಿಂತ ಬಯಲಾಯ್ತು ಭಯಾನಕ ಸಂಗತಿ

ಕೊರೊನಾ 2ನೇ ಅಲೆ ಶವಪರೀಕ್ಷೆ: ಮೊದಲನೇ ಅಲೆಗಿಂತ ಬಯಲಾಯ್ತು ಭಯಾನಕ ಸಂಗತಿ

ಬೆಂಗಳೂರು : ದೇಶಕ್ಕೆ ದೇಶವೇ ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ರಾಜ್ಯದಲ್ಲಿಯೂ ಸೋಂಕಿನ ಅಟ್ಟಹಾಸ ಮುಂದುವರೆದಿದೆ. ಸದ್ಯ ಕೋವಿಡ್ ಎರಡನೇ ಅಲೆಯಲ್ಲಿ ಸಾವನಪ್ಪಿದ ಸೋಂಕಿತರ ಶವಪರೀಕ್ಷೆಯಲ್ಲಿ ದಂಗಾಗಿಸುವ ಅಂಶವೊಂದು ವೈರಲ್ ಆಗಿದೆ.

ಹೆಸರಾಂತ ವಿಧಿ ವಿಜ್ಞಾನ ತಜ್ಞ ಡಾಕ್ಟರ್ ದಿನೇಶ್, ಮೊದಲನೆ ಶವಪರೀಕ್ಷೆ ವೇಳೆ ಮೃತದೇಹದಲ್ಲೂ ಕರೊನಾ ವೈರಸ್ ಕಂಡುಬಂತು ಮತ್ತು ಆಸ್ಪತ್ರೆಯಲ್ಲೂ ಕರೊನಾ ಪಾಸಿಟಿವ್ ಇತ್ತು. ಈ ವೇಳೆ ಎರಡು ಶ್ವಾಸಕೋಶ ತೂಕ 2000 ಗ್ರಾಂ ಇತ್ತು. ಆದರೆ, ಈ ಬಾರಿಯ ಶ್ವಾಸಕೋಶ ತೂಕ ಎರಡು ಸೇರಿ 800 ಗ್ರಾಂಗಿಂತಲೂ ಕಡಿಮೆ ಇದೆ ಎಂದು ಹೇಳಿದರು.

ಮೊದಲನೇ ಪರೀಕ್ಷೆಯಲ್ಲಿ ಮೆದುಳಿನಲ್ಲಿ ಸೋಂಕು ಕಂಡುಬಂದಿರಲಿಲ್ಲ.ಆದರೆ, ಈ ಬಾರಿ ಮೆದುಳಿನಲ್ಲೂ ಸೋಂಕು ಕಂಡುಬಂದಿದೆ. ಶ್ವಾಸಕೋಶ ಹಾನಿ ಈ ಬಾರಿ ಹೆಚ್ಚಾಗಿದೆ. ಮೊದಲು ಆರ್ಟಿಪಿಆರ್ ಪಾಸಿಟಿವ್ ಬರುತ್ತಿತ್ತು. ಆದರೆ, ಈರ ಆರ್ಟಿಪಿಸಿಆರ್ ನೆಗಿಟಿವ್ ಬರುತ್ತಿದ್ದೆ. ಆದರೂ ಸೋಂಕಿನ ತೀವ್ರತೆ ಹೆಚ್ಚಿದೆ. ಇದೇ ಒಂದು ದೊಡ್ಡ ವ್ಯತ್ಯಾಸ ಆಗಿದೆ. ಬಿಪಿ, ಶುಗರ್ ಇದ್ದ ಕಾರಣ ಲಿವರ್ ಮತ್ತು ಕಿಡ್ನಿಗೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿದರು.

ರಕ್ತದಲ್ಲಿಯೂ ಬದಲಾವಣೆಗಳು ಕಾಣುತ್ತಿವೆ. ಶ್ವಾಸಕೋಶದಲ್ಲಿ ಬದಲಾವಣೆ ಇದೆ. ಆದರೆ, ಆರ್ ಟಿಪಿಸಿಆರ್ ನಲ್ಲಿ ಪಾಸಿಟಿವ್ ಬರುತ್ತಿಲ್ಲ. ಎಲ್ಲರಲ್ಲೂ ಕರೊನಾ ಲಕ್ಷಣಗಳು ಸಾಮಾನ್ಯವಾಗಿದೆ. ಆದರೆ, ವ್ಯತ್ಯಾಸ ಮಾತ್ರ ತುಂಬಾ ಇದೆ. ಹೀಗಾಗಿ ಇದು ಕರೊನಾ ವೈರಸ್ ನ ಮತ್ತೊಂದು ರೂಪಾಂತರ ವೈರಸ್ ಇರಬಹುದು ಎಂದು ಮಾಹಿತಿ ನೀಡಿದರು.

ಎರಡನೇ ಅಲೆಯ ಶವಪರೀಕ್ಷೆಯ ದೇಹದಲ್ಲಿ ಫೈಬ್ರೂಟಿಕ್ ಆಗಿತ್ತು. ಅಂದರೆ ಎಷ್ಟೇ ಆಮ್ಲಜನ ನೀಡಿದರು ಉಪಯೋಗ ಆಗುವುದಿಲ್ಲ. ಅವರು ಖಂಡಿತ ಸಾಯುತ್ತಾರೆ. ಫೈಬ್ರೂಟಿಕ್ ಅಂದರೆ ಚರ್ಮದ ರೀತಿ ಬೆಳೆದಿರುತ್ತದೆ. ಇದರಿಂದ ಆಮ್ಲಜನಕ ಮತ್ತು ಇಂಗಾಲ ಡೈ ಆಕ್ಸೈಡ್ ಕ್ರಮವಾಗಿ ಒಳಗೆ ಬರುವುದು ಮತ್ತು ಹೊರಗೆ ಹೋಗುವುದನ್ನು ತಡೆಯುತ್ತದೆ. ಆಮ್ಲಜನಕ ದೇಹದ ಒಳಗಡೆ ಹೋಗುವುದೇ ಇಲ್ಲ.

ಆರ್ ಟಿಪಿಸಿಆರ್ ನಲ್ಲಿ ನೆಗಿಟಿವ್ ಬಂದರೂ ಸಿಟಿ ಸ್ಕ್ಯಾನ್ ಮಾಡಿಸಿದಾಗಲೇ ಸಮಸ್ಯೆ ತಿಳಿಯುವುದು. ಸಿಟಿ ಸ್ಕ್ಯಾನ್ ನಲ್ಲಿ ವೈರಸ್ ಪತ್ತೆಯಾವುದಿಲ್ಲ. ಆದರೆ, ವೈರಸ್ ನಿಂದ ದೇಹದಲ್ಲಿ ಆಗಿರುವ ಬದಲಾವಣೆ ತಿಳಿಯುತ್ತದೆ. ರಕ್ತದಲ್ಲಿ ಗೊತ್ತಾಗುತ್ತದೆ. ಹೀಗಾಗಿ ಕೊರೊನಾ ಎರಡನೇ ಅಲೆ ಅರ್ಥ ಮಾಡಿಕೊಳ್ಳುವುದು ನಮಗೂ ಸಹ ಸವಾಲಾಗಿದೆ. ಹೀಗಾಗಿ ಸರ್ಕಾರ ತಕ್ಷಣ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕು.

ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ಜನರು ಸಹ ಆರೋಗ್ಯದ ಮೇಲೆ ಎಚ್ಚರಿಕೆ ವಹಿಸಿ ಸರ್ಕಾರದೊಂದಿಗೆ ಸಹಕರಿಸಬೇಕು. ಹೀಗಿದ್ದಲ್ಲಿ ಮಾತ್ರ ಕೊರೊನಾ ಸಂಕಟದಿಂದ ಹೊರಬರಲು ಸಾಧ್ಯ ಎಂದು ಸಲಹೆ ನೀಡಿದರು.