ಮನ್‌‌‌ಸುಖ್‌‌ ಹಿರೇನ್‌‌ ಸಾವು ಪ್ರಕರಣ - ದುಬಾರಿ ಬೆಲೆ ಕಾರು ಎಟಿಎಸ್‌ ವಶಕ್ಕೆ - BC Suddi
ಮನ್‌‌‌ಸುಖ್‌‌ ಹಿರೇನ್‌‌ ಸಾವು ಪ್ರಕರಣ – ದುಬಾರಿ ಬೆಲೆ ಕಾರು ಎಟಿಎಸ್‌ ವಶಕ್ಕೆ

ಮನ್‌‌‌ಸುಖ್‌‌ ಹಿರೇನ್‌‌ ಸಾವು ಪ್ರಕರಣ – ದುಬಾರಿ ಬೆಲೆ ಕಾರು ಎಟಿಎಸ್‌ ವಶಕ್ಕೆ

ಮುಂಬೈ:  ಮನ್‌‌‌ಸುಖ್‌‌ ಹಿರೇನ್‌‌ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದಮನ್‌‌ನಲ್ಲಿ ದುಬಾರಿ ಬೆಲೆಯ ಕಾರೊಂದನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ವಶಪಡಿಸಿಕೊಂಡಿದೆ.

‘ಆಫ್‌ಲೈನ್‌ ತರಗತಿ ಮುಂದುವರೆಯಲಿದ್ದು, ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ’ – ಅಶ್ವತ್ಥನಾರಾಯಣ

“ಈ ಕಾರು ಮಹಾರಾಷ್ಟ್ರದ ನೋದಣಿ ಸಂಖ್ಯೆಯಲ್ಲಿದ್ದು, ಈ ಕಾರು ಯಾರ ಒಡೆತನದಲ್ಲಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.

“ಮನ್‌‌‌ಸುಖ್‌‌ ಹಿರೇನ್‌‌ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್‌ ತಂಡ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಬಳಿ ಗುಜರಾತ್‌ ಮೂಲದ ವ್ಯಕ್ತಿಯನ್ನು ಕೂಡಾ ವಶಪಡಿಸಿಕೊಂಡಿದೆ. ಬಂಧಿತರಿಗೆ ಈ ವ್ಯಕ್ತಿ ಸಿಮ್‌ ಕಾರ್ಡ್ ನೀಡಿದ್ದಾನೆ ಎಂದು ತಿಳಿದು ಬಂದಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಧಿತ ವ್ಯಕ್ತಿಯಿಂದ ಅನೇಕ ಸಿಮ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ

error: Content is protected !!