ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತುರ್ತು ಆರೋಗ್ಯ ಕೇಂದ್ರ ಸ್ಥಾಪಿಸುತ್ತಿರುವ ನಟ ಅಜಯ್‌ ದೇವ್‌ಗನ್‌ - BC Suddi
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತುರ್ತು ಆರೋಗ್ಯ ಕೇಂದ್ರ ಸ್ಥಾಪಿಸುತ್ತಿರುವ ನಟ ಅಜಯ್‌ ದೇವ್‌ಗನ್‌

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತುರ್ತು ಆರೋಗ್ಯ ಕೇಂದ್ರ ಸ್ಥಾಪಿಸುತ್ತಿರುವ ನಟ ಅಜಯ್‌ ದೇವ್‌ಗನ್‌

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆ ಹಲವಾರು ಮಂದಿಗೆ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ, ಆಕ್ಸಿಜನ್‌ ವ್ಯವಸ್ಥೆ ಲಭಿಸದೆ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರಿಗೆ ಸಹಾಯ ಹಸ್ತ ಚಾಚಿರುವ ಬಾಲಿವುಡ್‌ ನಟ ಅಜಯ್ ದೇವ್‌ಗನ್‌ ಮುಂದಾಗಿದ್ದಾರೆ.

ಚಿತ್ರರಂಗದ ಸಹೋದ್ಯೋಗಿಗಳ ಜೊತೆ ಸೇರಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತುರ್ತು ಆರೋಗ್ಯ ಕೇಂದ್ರ (ಎಮರ್ಜೆನ್ಸಿ ಮೆಡಿಕಲ್ ಯೂನಿಟ್) ಸ್ಥಾಪಿಸುತ್ತಿರುವ ನಟ ಅಜಯ್‌ ದೇವ್‌ಗನ್‌ ಈ ಮೂಲಕ ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಮುಂಬೈ ಜನತೆಗೆ ಜನತೆಗೆ ತುರ್ತು ಚಿಕಿತ್ಸೆ ನೀಡಲು ಬಿಎಂಸಿ (ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್) ಹಾಗೂ ಹಿಂದೂಜಾ ಆಸ್ಪತ್ರೆಯ ಜೊತೆಗೆ ಕೈ ಜೋಡಿಸಿರುವ ನಟ ಅಜಯ್‌, ಶಿವಾಜಿ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ & ಗೈಡ್ಸ್ ಹಾಲ್‌ನಲ್ಲಿ ತೆರೆಯಲಾಗುತ್ತಿರುವ 20 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಗೆ ವೆಂಟಿಲೇಟರ್, ಆಕ್ಸಿಜನ್ ಹಾಗೂ ಪ್ಯಾರಾ ಮಾನಿಟರ್ಸ್‌ಗಾಗಿ ಅಗತ್ಯ ನೆರವು ನೀಡುತ್ತಿದ್ದಾರೆ.

ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಕೊರೊನಾ ಸೋಂಕು ದೃಢ..!