ಅಸ್ಸಾಂ ಜನತೆಯು ಕಾಂಗ್ರೆಸ್ ಮೈತ್ರಿಕೂಟಕ್ಕೆ ಕೆಂಪು ಕಾರ್ಡ್ ತೋರಿಸಿದ್ದಾರೆ: ಧಾನಿ ನರೇಂದ್ರ ಮೋದಿ - BC Suddi
ಅಸ್ಸಾಂ ಜನತೆಯು ಕಾಂಗ್ರೆಸ್ ಮೈತ್ರಿಕೂಟಕ್ಕೆ ಕೆಂಪು ಕಾರ್ಡ್ ತೋರಿಸಿದ್ದಾರೆ: ಧಾನಿ ನರೇಂದ್ರ ಮೋದಿ

ಅಸ್ಸಾಂ ಜನತೆಯು ಕಾಂಗ್ರೆಸ್ ಮೈತ್ರಿಕೂಟಕ್ಕೆ ಕೆಂಪು ಕಾರ್ಡ್ ತೋರಿಸಿದ್ದಾರೆ: ಧಾನಿ ನರೇಂದ್ರ ಮೋದಿ

ಕೊಕ್ರಜಾರ್: “ಅಸ್ಸಾಂ ರಾಜ್ಯದ ಜನರು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಗೆ ಕೆಂಪು ಕಾರ್ಡ್ ತೋರಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಅಸ್ಸಾಂನಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿದ್ದು, ಇದರಂತೆ ಫುಟ್ಬಾಲ್‌ನಲ್ಲಿ ತಪ್ಪೆಸಗಿದ ಆಟಗಾರನ ವಿರುದ್ಧ ರೆಫರಿ ರೆಡ್ ಕಾರ್ಡ್ ತೋರಿಸುವ ರೀತಿಯಲ್ಲಿ ಅಸ್ಸಾಂ ಜನತೆಯು ಕಾಂಗ್ರೆಸ್ ಮಹಾಮೈತ್ರಿಕೂಟಕ್ಕೆ ಕೆಂಪು ಕಾರ್ಡ್ ತೋರಿಸಿದ್ದಾರೆ” ಎಂದರು.

“ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನ ಜನರು ಎನ್‌ಡಿಎಗೆ ಆಶೀರ್ವಾದವನ್ನು ನೀಡಿದ್ದು, ಅಸ್ಸಾಂ ಜನತೆಯು ಕಾಂಗ್ರೆಸ್ ಮೈತ್ರಿಕೂಟಕ್ಕೆ ಕೆಂಪು ಕಾರ್ಡ್ ತೋರಿಸಿದ್ದಾರೆ” ಎಂದಿದ್ದಾರೆ.

ಇನ್ನು “ಕಾಂಗ್ರೆಸ್ ತನ್ನ ಆಡಳಿತ ಕಾಲದಲ್ಲಿ ಬೋಡೊಲ್ಯಾಂಡ್ ಮೇಲೆ ಬಾಂಬ್, ಗನ್ ದಾಳಿ ಮಾಡಿದ್ದು, ಸಂಸ್ಕೃತಿಗೆ ದಿಗ್ಭಂಧನ ಹೇರಿದೆ. ಆದರೆ ಬೋಡೊಲ್ಯಾಂಡ್‌ಗೆ ಎನ್‌ಡಿಎ ಶಾಂತಿ ಹಾಗೂ ಗೌರವವನ್ನು ಉಡುಗೊರೆಯಾಗಿ ನೀಡಿದೆ” ಎಂದು ಹೇಳಿದ್ದಾರೆ.

 

 ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಸಾಧ್ಯತೆ..!

error: Content is protected !!