'ರಾಮಾಯಣ'ದ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿ ಸೇರ್ಪಡೆ - BC Suddi
‘ರಾಮಾಯಣ’ದ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿ ಸೇರ್ಪಡೆ

‘ರಾಮಾಯಣ’ದ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿ ಸೇರ್ಪಡೆ

ನವದೆಹಲಿ: ರಾಮಾಯಣ ಟಿವಿ ಸರಣಿಯಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟ ಅರುಣ್ ಗೋವಿಲ್ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳದ ನಾಲ್ಕು ವಿಧಾನಸಭಾ ಚುನಾವಣೆ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಕೆಲವು ದಿನಗಳು ಇರುವಾಗ ಅರುಣ್ ಗೋವಿಲ್ ಅವರು ಬಿಜೆಪಿ ಸೇರ್ಪಡೆಯಾಗಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಮೀರತ್ ಪಟ್ಟಣದಲ್ಲಿ ಬೆಳೆದ ನಟ ಗೋವಿಲ್ ಸಹರಾನ್‌ಪುರ್ ಮತ್ತು ಶಹಜಹಾನ್‌ಪುರದ ಶಾಲೆಗಳಲ್ಲಿ ಅಧ್ಯಯನ ಮಾಡಿದ್ದಾರೆ. ರಾಮಾಯಣದ ರಾಮ ಪಾತ್ರವನ್ನು ನಿರ್ವಹಿಸುವ ಮೊದಲು, ಅರುಣ್ ಗೋವಿಲ್ ತಮ್ಮ ಮೊದಲ ಚಿತ್ರ ಪಹೇಲಿ (1977) ಮೂಲಕ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷಿಸಿದ್ದರು.

ರಾಮಾಯಣದ ನಂತರ, ಗೋವಿಲ್ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಭೋಜ್‌ಪುರಿ, ಬ್ರಜ್ ಭಾಷಾ, ಒಡಿಯಾ ಮತ್ತು ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

error: Content is protected !!