ಜೈಪುರ: ಪಾಕಿಸ್ತಾನದ ಏಜೆಂಟರಿಗೆ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ 22 ವರ್ಷ ವಯಸ್ಸಿನ ಯೋಧರೊಬ್ಬರನ್ನು ಗುಪ್ತಚರ ಇಲಾಖೆಯು ಬಂಧಿಸಿದೆ.
ರಾಜಸ್ಥಾನದ ಸಿಕಾರ್ ಜಿಲ್ಲೆಯ ನಿವಾಸಿ ಆಕಾಶ್ ಮಹರಿಯಾ ಬಂಧಿತ ಸೈನಿಕ. ಸಿಕ್ಕಿಂನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಆಕಾಶ್ ಅವರನ್ನು ಭಾನುವಾರ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಆಕಾಶ್ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಗುಪ್ತಚರ ಏಟೆಂಟ್ಗಳ ಸಂಪರ್ಕ ಹೊಂದಿದ್ದ. ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.