ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದು ಲಸಿಕೆ ಮಾರಾಟ - ಫಾರ್ಮಾ ಕಂಪನಿಯ ಮಾಲೀಕ ಅರೆಸ್ಟ್ - BC Suddi
ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದು ಲಸಿಕೆ ಮಾರಾಟ – ಫಾರ್ಮಾ ಕಂಪನಿಯ ಮಾಲೀಕ ಅರೆಸ್ಟ್

ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದು ಲಸಿಕೆ ಮಾರಾಟ – ಫಾರ್ಮಾ ಕಂಪನಿಯ ಮಾಲೀಕ ಅರೆಸ್ಟ್

ಮಧ್ಯಪ್ರದೇಶ: ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡಿದ ಆರೋಪದಡಿ ಫಾರ್ಮಾ ಕಂಪನಿಯ ಮಾಲೀಕನನ್ನು ಗುರುವಾರ ಬಂಧಿಸಲಾಗಿದೆ.

ಬಂಧಿತನನ್ನು ಇಂದೋರ್‌ನ ರಾಣಿ ಬಾಗ್ ಪ್ರದೇಶದ ನಿವಾಸಿ ವಿನಯ್ ಶಾಕರ್ ತ್ರಿಪಾಠಿ ಎಂದು ಗುರುತಿಸಲಾಗಿದೆ್.

“ಆರೋಪಿಯ ಕಾರಿನಿಂದ ಸುಮಾರು 400 ರೆಮ್‌ಡೆಸಿವಿರ್ ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವುಗಳು ಔಷಧ ಇಲಾಖೆಯಿಂದ ತನಿಖೆ ನಡೆಸಲ್ಪಟ್ಟ ನಂತರ ನಕಲಿ ಎಂದು ತಿಳಿದುಬಂದಿದೆ.

ಆರೋಪಿ ವಿನಯ್ ಇಂದೋರ್‌ನ ಪಿತಾಂಪುರದಲ್ಲಿ ಫಾರ್ಮಾ ಕಂಪನಿಯೊಂದನ್ನು ಹೊಂದಿದ್ದು, ಔಷಧ ಕೊರತೆಯ ಲಾಭವನ್ನು ಪಡೆಯಲು ಮತ್ತು ಹಣ ಸಂಪಾದಿಸಲು ಯೋಜಿಸಿದ್ದರು ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರು ಪ್ರಸಾದ್ ಪರಾಶರ್ ಹೇಳಿದರು.

ಹಿಮಾಚಲ ಪ್ರದೇಶದ ಫಾರ್ಮಾ ಘಟಕದಲ್ಲಿ ಔಷಧಿಗಳನ್ನು ತಯಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡ ನಕಲಿ ಚುಚ್ಚುಮದ್ದನ್ನು ಕಪ್ಪು ಮಾರುಕಟ್ಟೆಯಲ್ಲಿ 20 ಲಕ್ಷ ರೂ.ಗೆ ಮಾರಾಟ ಮಾಡಬೇಕಿತ್ತು.

ಕೊರೊನಾ ವಿರುದ್ಧದ ಹೋರಾಟದಲ್ಲಿ ರೆಮ್‌ಡೆಸಿವಿರ್ ಅನ್ನು ಪ್ರಮುಖ ಆಂಟಿ-ವೈರಲ್ ಔಷಧವೆಂದು ಪರಿಗಣಿಸಲಾಗಿದೆ.

ರಾಜ್ಯದಲ್ಲಿ ಔಷಧದ ಕೊರತೆಯ ಮಧ್ಯೆ, ಮಧ್ಯಪ್ರದೇಶವು ಗುರುವಾರ 9,264 ಬಾಟಲುಗಳು ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಹೊಂದಿರುವ 200 ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದೆ.