ಏಪ್ರಿಲ್ 1 ರಂದು ಪಶ್ಚಿಮ ಬಂಗಾಳ 2ನೇ ಹಂತದ ಮತದಾನ - BC Suddi
ಏಪ್ರಿಲ್ 1 ರಂದು ಪಶ್ಚಿಮ ಬಂಗಾಳ 2ನೇ ಹಂತದ ಮತದಾನ

ಏಪ್ರಿಲ್ 1 ರಂದು ಪಶ್ಚಿಮ ಬಂಗಾಳ 2ನೇ ಹಂತದ ಮತದಾನ

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆಗೆ ಗುರುವಾರ ಎರಡನೇ ಹಂತದಲ್ಲಿ ಏ. 1ರಂದುಮತದಾನ ನಡೆಯುತ್ತಿದೆ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ವಿರುದ್ಧ ಈ ಬಾರಿ ನೇರ ಹಣಾಹಣಿ ಸೃಷ್ಟಿಯಾಗಿದೆ. ವಿಶೇಷವೆಂದರೆ ಸುವೇಂದು ಅಧಿಕಾರಿ ಈ ಮುಂಚೆ ಮಮತಾ ನೇತೃತ್ವದ ಟಿಎಂಸಿ ಪಕ್ಷದಲ್ಲೇ ಇದ್ದರು.

ಚುನಾವಣೆ ಹೊಸ್ತಿಲಲ್ಲಿ ಅವರು ಬಿಜೆಪಿ ಸೇರಿಕೊಂಡು ಇದೀಗ ಮಮತಾ ಬ್ಯಾನರ್ಜಿ ವಿರುದ್ಧವೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2016ರ ಚುನಾವಣೆಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಬೆನ್ನೆಲುಬಾಗಿ ನಿಂತು ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ಸುವೇಂದು ಅಧಿಕಾರಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾಯಕತ್ವದ ವಿರುದ್ಧ ಬಂಡೆದ್ದು, ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು.

ಬಿಜೆಪಿಯಿಂದ ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು, ಕಮಲ ಅರಳಿಸುವ ಪಣ ತೊಟ್ಟಿದ್ದಾರೆ. ತಮ್ಮ ಮಾಜಿ ನಾಯಕಿಗೆ ದೊಡ್ಡ ಸವಾಲಾಗಿದ್ದಾರೆ. ಟಿಎಂಸಿ ಭದ್ರಕೋಟೆಯಾಗಿದ್ದ ನಂದಿಗ್ರಾಮದಲ್ಲಿ ಬಿಜೆಪಿ ಪರ್ವ ಆರಂಭಿಸುವ ಸವಾಲು ಹಾಕಿದ್ದಾರೆ.

ಮೇ ತಿಂಗಳಲ್ಲಿ ಸಂಸತ್ತಿಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದ ರೈತ ಸಂಘಟನೆ

error: Content is protected !!