'ದಯವಿಟ್ಟು ಹೊರ ಬನ್ನಿ ಅಪ್ಪ' - ಉಗ್ರನ ಶರಣಾಗತಿಗೆ 4 ವರ್ಷದ ಪುತ್ರನ ಮನವಿ - BC Suddi
‘ದಯವಿಟ್ಟು ಹೊರ ಬನ್ನಿ ಅಪ್ಪ’ – ಉಗ್ರನ ಶರಣಾಗತಿಗೆ 4 ವರ್ಷದ ಪುತ್ರನ ಮನವಿ

‘ದಯವಿಟ್ಟು ಹೊರ ಬನ್ನಿ ಅಪ್ಪ’ – ಉಗ್ರನ ಶರಣಾಗತಿಗೆ 4 ವರ್ಷದ ಪುತ್ರನ ಮನವಿ

ಶ್ರೀನಗರ:  ಕಾಶ್ಮೀರದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರನ ಬಳಿ, ಆತನ ನಾಲ್ಕು ವರ್ಷದ ಪುತ್ರ, ”ದಯವಿಟ್ಟು ಹೊರಗೆ ಬನ್ನಿ ಅಪ್ಪ” ಎಂದು ಗೋಗರೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ.

25 ವರ್ಷದ ಉಗ್ರ ಅಕ್ವಿಬ್ ಅಹ್ಮದ್ ಮಲಿಕ್ ಮೂರು ತಿಂಗಳ ಹಿಂದಷ್ಟೆ ಕಾಶ್ಮೀರದಲ್ಲಿ ಉಗ್ರರ ಗುಂಪು ಸೇರಿಕೊಂಡಿದ್ದನು. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಮನೆಯೊಂದರಲ್ಲಿ ಆತ ಅಡಗಿ ಕುಳಿತ್ತಿದ್ದು, ಸೇನೆಯು ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ ಉಗ್ರನು ಶರಣಾಗುವಂತೆ ಮನವೊಲಿಸಲು ಆತನ ಕುಟುಂಬಸ್ಥರನ್ನು ಅಲ್ಲಿಗೆ ಕರೆತರಲಾಗಿತ್ತು. ಈ ಸಂದರ್ಭ ಉಗ್ರನ ನಾಲ್ಕು ವರ್ಷದ ಪುತ್ರ ಲೌಡ್ ಸ್ಪೀಕರ್‌ನಲ್ಲಿ, ”ದಯವಿಟ್ಟು ಹೊರಗೆ ಬನ್ನಿ ಅಪ್ಪ, ನಿಮಗೆ ಏನೂ ಮಾಡಲ್ಲ. ನಾನು ನಿಮ್ಮನ್ನು ಕಾಯುತ್ತಿದ್ದೇನೆ” ಎಂದು ಮನವಿ ಮಾಡಿದ್ದಾನೆ. ಬಳಿಕ ಉಗ್ರನ ಪತ್ನಿಯೂ ಕೂಡಾ ಮನವಿ ಮಾಡಿದ್ದರು. ”ನೀವು ಹೊರ ಬಂದು ಶರಣಾಗಿ, ನೀವು ಹೊರ ಬರಲು ಬಯಸದಿದ್ದರೆ ನನ್ನನ್ನು ಶೂಟ್‌ ಮಾಡಿ. ನಮ್ಮ ಮಕ್ಕಳೂ ನನ್ನೊಂದಿಗೆ ಬಂದಿದ್ದಾರೆ. ದಯವಿಟ್ಟು ಹೊರ ಬಂದು ಶರಣಾಗಿ” ಎಂದು ಉಗ್ರ ಅಕ್ವಿಬ್‌ನ ಪತ್ನಿ ಧ್ವನಿವರ್ಧಕದಲ್ಲಿ ಬೇಡಿಕೊಂಡಿದ್ದರು. ಆದರೆ ಆತ ಮಾತ್ರ ಶರಣಾಗಲು ಒಪ್ಪದ ಕಾರಣ ಅಂತಿಮವಾಗಿ ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಅಕ್ವಿಬ್ ಸೇರಿ ನಾಲ್ವರು ಉಗ್ರರು ಹತರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಭಾರತೀಯ ಸೇನೆಯ ವಿಕ್ಟರ್ ಫೋರ್ಸ್‌ನ ಮೇಜರ್ ಜನರಲ್ ರಶೀಮ್ ಬಾಲಿ, ”ಉಗ್ರನ ಪುತ್ರ, ಪತ್ನಿ ಇಬ್ಬರು ಆತನಿಗೆ ಶರಣಾಗಲು ಮನವಿ ಮಾಡಿದರು ಅಕ್ವಿಬ್ ಶರಣಾಗಿಲ್ಲ. ಆತ ಶರಣಾಗಲು ಮುಂದಾಗಿದ್ದ ಆದರೆ ಆತನ ಸಹಚರರು ಆತನನ್ನು ತಡೆದಿದ್ದಾರೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆಯ ಮಧ್ಯೆ ಎರಡು ವಿಧೇಯಕ ಅಂಗೀಕಾರ!

error: Content is protected !!